BengaluruPolitics

ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಟಿಕೆಟ್ ಆಕಾಂಕ್ಷಿಗಳ ಸಭೆ

ಬೆಂಗಳೂರು; ಮುಂಬರು 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗಮದಲ್ಲಿ ಇರಿಸಿ ಇಂದು ವೀರಶೈವ ಲಿಂಗಾಯತ ಸಮುದಾಯದ ಸಭೆ ಕರೆಯಲಾಗಿದೆ, ಸಮುದಾಯದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳನ್ನ ಗಮನದಲ್ಲಿ ಇಟ್ಟು ಕೊಂಡು ಈ ಸಭೆ ಕರೆಯಲಾಗಿದೆ.

ಶಾಸಕರು ಮಾಜಿ ಸಚಿವರಾದ ಶಾಮನೂರ್ ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಕಂಡ್ರೆ, ಶಾಸಕರು ಮಾಜಿ ಸಚಿವರಾದ ಎಂ ಬಿ ಪಾಟೀಲ್ ಮತ್ತು ಹಿರಿಯ ವೀರಶೈವ ಲಿಂಗಾಯತ ರಾಜ್ಯ ಮುಖಂಡರುಗಳು ವಿಶೇಷ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ವೀರಶೈವ ಲಿಂಗಾಯಿತರು ಹೆಚ್ಚು ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸಮುದಾಯದ ಮುಖಂಡರಿಗೆ ಹೆಚ್ಚು ಟಿಕೆಟ್ ನೀಡಬೇಕು ದಕ್ಷಿಣ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಹೆಚ್ಚು ಟಿಕೆಟ್ ಗಳನ್ನು ನೀಡಿ ಗೆಲ್ಲಿಸಲು ಎಲ್ಲ ಹಿರಿಯ ಮುಖಂಡರು ಕಾರ್ಯಕರ್ತರು ಶ್ರಮಿಸುವ ನಿರ್ಣಯ ಕೈಗೊಳ್ಳಲಾಗುವದು. ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ತರುವ ದೃಷ್ಠಿಯಂದ ಸಮುದಾಯದ ಬಂಧುಗಳಿಗೆ ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆ ಹಾಗೂ ಕಾಂಗ್ರೆಸ್ ಪಕ್ಷ ಲಿಂಗಾಯಿತ ವೀರಶೈವ ಸಮುದಾಯದ ಮೇಲೆ ಇಟ್ಟಿರುವ ಗೌರವ ತಿಳಿಸಿ ಪಕ್ಷವನ್ನು ಬಲಪಡಿಸುವ ಸಮಾಲೋಚನೆಗಳು ನಡೆಯಲಿವೆ.

ಇಂದು ಕಾಂಗ್ರೇಸ್‌ ನ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗು ಟಿಕೇಟ್‌ ಆಕಾಂಕ್ಷಿಗಳ ಸಭೆಯಲ್ಲಿ ಸಮುದಾಯದ ಮತಗಳನ್ನ ಕಾಂಗ್ರೇಸ್‌ ಪರ ಸೆಳೆಯುವ ವಿಚಾರಚಾಗಿ ಚಚೆ೯ ನಡೆಸುವ ಸಾಧ್ಯತೆ ಇದೆ.ಈಗ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ಪರವಾಗಿದ್ದಾರೆ. ಸಮುದಾಯಾದ ಮತಗಳು ಕಾಂಗ್ರೇಸ್‌ ಗೆ ಕಡಿಮೆ ಪ್ರಮಾಣದಲ್ಲಿ ಬೀಳುತ್ತಿವೆ ಇದು ಚುನವಾಣೆಯಲ್ಲಿ ಕಾಂಗ್ರೇಸ್‌ ಗೆ ಹಿನ್ನಡೆಯಾಗುವ ಸಾದ್ಯತೆ ಇದೆ, ಹಾಗಾಗಿ ಸಮುದಾಯದ ಮತಗಳನ್ನ ಸೆಳೆಯಬೇಕಾದರೆ ಈ ಬಾರಿ ಸಮುದಾಯದ ಅಭ್ಯಥಿ೯ಗಳಿಗೆ ಪಕ್ಷ ಕಳೆದಬಾರಿಗಿಂತ ಹೆಚ್ಚಿನ ಮನ್ನಣೆ ನೀಡ ಬೇಕು. ಹಾಗದಲ್ಲಿ ಮಾತ್ರ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೇಸ್‌ ಕಡೆ ಒಲವು ತೋರುತ್ತದೆ ಎಂದು ಸಭೆಯಲ್ಲಿ ಚಚಿ೯ಸಲಾಗುವುದು.

ಹಾಗೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಕಳೆದಬಾರಿಗಿಂತಲೂ ಈ ಬಾರಿ ಹೆಚ್ಚು ಅಭ್ಯಥ೯ಗಲಿಗೆ ಟಿಕೇಟ್‌ ನೀಡಿ ಅವಕಾಶಮಾಡಿ ಕೂಡ ಬೇಕೆಂದು ಬೇಡಿಕೆ ಇಡಲಿದ್ದಾರೆ. ಕಳೆದ ಬಾರಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಕೇವಲ 45 ಕ್ಷೇತ್ರಗಳಲ್ಲಿ ಅವಕಾಶ ನೀಡಲಾಗಿತ್ತು ಆದರೆ ಈ ಬಾರಿ 73 ಅಭ್ಯಥಿ೯ಗಳಿಗೆ ಅವಕಾಶ ನೀಡ ಬೇಕೆಂದು ಕೇಳಲಿದ್ದಾರೆ. ಹಾಗೇ ಬೆಂಗಳೂರು ನಗರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಬ್ಬ ಶಾಸಕರೂ ಇಲ್ಲ ಅಲ್ಲದೆ ನಮ್ಮ ಸಮುದಾಯದ ಯಾವ ಅಭ್ಯಥಿ೯ಗಳಿಗೂ ಕಳೆದ ಬಾರಿ ಚುನಾವಣೆಯಲ್ಲಿ ಟಿಕೇಟ್‌ ನೀಡಿರಲಿಲ್ಲ ಹಾಗಾಗಿ ಈ ಬಾರಿ ನಮ್ಮ ಸಮುದಾಯಾದ ಇಬ್ಬರು ಅಭ್ಯಥಿ೯ಗಳಿಗೆ ಕಾಂಗ್ರೇಸ್‌ ಪಕ್ಷದ ಟಿಕೇಟ್‌ ನೀಡಬೇಕೆಂದು ಮುಖಂಡರು ಆಗ್ರಹಿಸಸಲಿದ್ದಾರೆ, ಚಿಕ್ಕ ಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಗಂಗಾಂಬಿಕಾ ಮಲ್ಲಿಕಾಜು೯ನ್‌ ಹಾಗು ರಾಜಾಜಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಬಿ ಎಸ್‌ ಪುಟ್ಟರಾಜು ರವರಿಗೆ ಟಿಕೇಟ್‌ ನೀಡಬೇಕಂಬ ಬೇಡಿಕೆಯನ್ನ ಪಕ್ಷದ ಮುಂದೆ ಇಡುವ ಬಗ್ಗೆ ಚಚಿ೯ಸುವ ಸಾಧ್ಯತೆ ಇದೆ.

Share Post