ಬಿಲ್ ಪಾವತಿಗೆ ಕಮೀಷನ್; ರಾಜ್ಯಪಾಲರಿಗೆ ಗುತ್ತಿಗೆದಾರರ ದೂರು
ಬೆಂಗಳೂರು; ಎರಡು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಿಲ್ಲ. ಕೇಳಿದರೆ ಹತ್ತರಿಂದ ಹದಿನೈದು ಪರ್ಸೆಂಟ್ ಕಮೀಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.
ಬೆಂಗಳೂರು ಉಸ್ತುವಾರಿ ಸಚಿವರ ಪರವಾಗಿ ಬಿಬಿಎಂಪಿ ಕಮೀಷನರ್ ಕಮೀಷನ್ ಕೇಳ್ತಿದ್ದಾರೆ. ಕಮೀಷನ್ ಕೊಡದಿದ್ದಕ್ಕೆ ಫಂಡ್ ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ. 1500 ಕೋಟಿ ರೂಪಾಯಿ ಫಂಡ್ ಇದ್ದರೂ ಬಿಲ್ ನೀಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎರಡು ವರ್ಷಗಳಿಂದಲೂ ಕಾಮಗಾರಿ ಬಿಲ್‌ಗೆ ಕಾಯುತ್ತಿದ್ದೇವೆ. ೨೫೦೦ ಕೋಟಿ ರೂಪಾಯಿ ಬಿಲ್ ನೀಡಬೇಕಿದೆ. ಆದ್ರೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.