BengaluruCinemaCrime

ಜೆಟ್ ಲ್ಯಾಗ್ ಪಬ್‌ನಲ್ಲಿ ಬೆಳಗ್ಗೆವರೆಗೂ ಪಾರ್ಟಿ; ನಟ ದರ್ಶನ್ ಸೇರಿ ಹಲವರಿಗೆ ನೋಟಿಸ್

ಬೆಂಗಳೂರು; ನಟ ದರ್ಶನ್, ಅಭಿಷೇಕ್ ಅಂಬರೀಶ್ ಸೇರಿ ಚಿತ್ರರಂಗದ ಹಲವು ಗಣ್ಯರು ಜೆಟ್ ಲಾಗ್ ಪಬ್ ನಲ್ಲಿ ಮುಂಜಾನೆವರೆಗೂ ಪಾರ್ಟಿ ಮಾಡಿದ್ದಾರೆ. ಈ ವಿಚಾರ ಸಂಬಂಧ ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಲು ಸುಬ್ರಹ್ಮಣ್ಯ ನಗರ ಪೊಲೀಸರು ಮುಂದಾಗಿದ್ದಾರೆ.

 

 ಜೆಟ್ ಲಾಗ್ ಪಬ್ ನಲ್ಲಿ ದರ್ಶನ್, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿ ಹಲವು ಚಿತ್ರರಂಗದ ಪ್ರಮುಖರು ಮಧ್ಯರಾತ್ರಿ 1ರ ನಂತರ ಪಾರ್ಟಿ ಶುರು ಮಾಡಿದ್ದರು. ಬೆಳಗ್ಗೆವರೆಗೂ ಅಲ್ಲಿ ಪಾರ್ಟಿ ಮಾಡಿದ್ದರು.

 

 ಹೀಗಾಗಿ ಪಬ್ ಓಪನ್ ಇದ್ದ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಸುಬ್ರಮಣ್ಯನಗರ ಪೊಲೀಸರು ಸಲಬ್ರಿಟಿಗಳಿಗೆ ನೋಟೀಸ್​​​​ ನೀಡಲು ಮುಂದಾಗಿದ್ದಾರೆ.

ಸದ್ಯ ಪಾರ್ಟಿಯಲ್ಲಿ ಭಾಗಿಯಾಗಿದ್ದ ಟಾಪ್ ಟೆನ್ ಸೆಲೆಬ್ರಿಟಿಗಳಿಗೆ ನೋಟೀಸ್ ನೀಡಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ಬಿ. ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ 6 ಜನ ಪೊಲೀಸರಿಗೂ ನೊಟೀಸ್ ಜಾರಿ ಮಾಡಲಾಗಿದೆ.

ಇತ್ತೀಚೆಗೆ ‘ಕಾಟೇರ’ ಸಿನಿಮಾ ರಿಲೀಸ್ ಆಗಿ ಗೆದ್ದಿತು. ಅದರ‌ ಸಕ್ಸಸ್ ಸೆಲೆಬ್ರೇಷನ್ ಬಳಿಕ ದರ್ಶನ್, ಅಭಿಷೇಕ್ ಅಂಬರೀಷ್, ಧನಂಜಯ್ ಸೇರಿ ಅನೇಕರು ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ಪಾರ್ಟಿ ಮಾಡಿದ್ದರು. ಜನವರಿ‌ 3ರಂದು‌ ರಾತ್ರಿ‌ ಪಬ್​ಗೆ ಇವರು ಬೆಳಗಿನಜಾವದವರೆಗೆ ಪಾರ್ಟಿ ಮಾಡಿದ್ದರು. ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ.

Share Post