BengaluruCrime

ಮಾರ್ಕೆಟ್‌ ಫ್ಲೈಓವರ್‌ ಮೇಲೆ ಸಿನಿಮೀಯ ದರೋಡೆ; 1.70 ಕೋಟಿ ಮೌಲ್ಯದ ಚಿನ್ನ ಕಳವು

ಬೆಂಗಳೂರು; ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಕೆ.ಆರ್‌.ಮಾರುಕಟ್ಟೆ ಬಳಿಯ ಫ್ಲೈಓವರ್‌ ಮೇಲೆ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ 1 ಕೋಟಿ 70 ಲಕ್ಷ ರೂಪಾಯಿ ಮೌಲ್ಯದ ಚಿನ್ನದವನ್ನು ದರೋಡೆ ಮಾಡಲಾಗಿದೆ.,

ಚಿನ್ನದ ವ್ಯಾಪಾರ ಸ್ಕೂಟರ್‌ನಲ್ಲಿ ಸುಮಾರು 3 ಕೆಜಿ 780 ಗ್ರಾಂನಷ್ಟು ಚಿನ್ನವನ್ನು ಸಾಗಿಸುತ್ತಿದ್ದರು. ಇದನ್ನು ಅರಿತಿದ್ದ ದುಷ್ಕರ್ಮಿಗಳು ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಫ್ಲೈಓವರ್‌ ಮೇಲೆ ಸ್ಕೂಟರ್‌ ಹೋಗುತ್ತಿದ್ದಂತೆ ಅಡ್ಡಗಟ್ಟಿದ್ದಾರೆ. ಈ ವೇಳೆ ಚಿನ್ನದ ವ್ಯಾಪಾರಿ ಸ್ಕೂಟರ್‌ನ್ನು ಸ್ಲೋ ಮಾಡುತ್ತಿದ್ದಂತೆ ಚಿನ್ನ ಇದ್ದ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದೆಲ್ಲೇ ಕ್ಷಣಗಳಲ್ಲಿ ನಡೆದುಹೋಗಿದೆ. ಫ್ಲೈಓವರ್‌ ಮೇಲೆ ಓಡಾಡುತ್ತಿರುವವರು ಏನಾಗ್ತಿದೆ ಎಂದು ತಿಳಿಯುವಷ್ಟರಲ್ಲೇ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಕೂಡಾ ಇಲ್ಲ. ಹೀಗಾಗಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚೋದು ಪೊಲೀಸರಿಗೆ ತಲೆನೋವಾಗಿದೆ.

ಈ ಬಗ್ಗೆ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post