BengaluruPolitics

ರಾಜ್ಯ ಸರ್ಕಾರದ ವಿರುದ್ಧ ಜನ ರೋಸಿದ್ದಾರೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಗುತ್ತಿದೆ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಒಂದು ಪೋಡಿ ಮಾಡಲು 40 ಸಾವಿರ ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಜನ ಬಿಜೆಪಿ ಸರ್ಕಾರದ ವಿರುದ್ಧ ರೋಸಿಹೋಗಿದ್ದು, ಸರ್ಕಾರ ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರೀ 40 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿಲ್ಲ, ಜನರ ರಕ್ತವನ್ನೂ ಹೀರುತ್ತಿದೆ. ವಿಧವಾ ವೇತನ, ಪಿಂಚಣಿ ಪಡೆಯುವುದಕ್ಕೂ ಲಂಚ ಕೊಡಬೇಕಿದೆ ಎಂದು ಆರೋಪ ಮಾಡಿದ್ದಾರೆ.

ನಾವು ಬಿಜೆಪಿಯವರಂತೆ ಮಾತು ಕೊಟ್ಟು ಅದನ್ನು ತಪ್ಪುವುದಿಲ್ಲ. ಜನರಿಗೆ ಗ್ಯಾರಂಟಿ ಪತ್ರದಲ್ಲಿ ಸಹಿ ಹಾಕಿ ಯಾವ್ಯಾವ ಯೋಜನೆಗಳನ್ನು ಮಾಡುತ್ತೇವೆ ಅನ್ನೋದನ್ನ ತಿಳಿಸುತ್ತಿದ್ದೇವೆ. ಉಚಿತ ವಿದ್ಯುತ್‌ ಯೋಜನೆ, ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ ಯೋಜನೆಗಳನ್ನು ನಮ್ಮ ಸರ್ಕಾರ ಬಂದರೆ ತಪ್ಪದೆ ಜನಕ್ಕೆ ತಲುಪಿಸುತ್ತೇವೆ ಎಂದು ಡಿಕೆಶಿ ಇದೇ ವೇಳೆ ತಿಳಿಸಿದ್ದಾರೆ.

 

Share Post