Bengaluru

ಕಾರು ಕದಿಯೋದೇ ಚಾಳಿ; ಕೊನೆಗೂ ಸಿಕ್ಕಿಬಿದ್ದ ಐನಾತಿ

ಬೆಂಗಳೂರು: ದೇಶದ ವಿವಿಧ ಭಾಗಗಳಲ್ಲಿ ಕಾರುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸತ್ಯೇಂದರ್ ಸಿಂಗ್ ಶೇಖಾವತ್ ಬಂಧಿತ ಆರೋಪಿ. ಈತ ರಾಜಸ್ಥಾನ ಮೂಲದವನೆಂದು ತಿಳಿದುಬಂದಿದೆ. ಆರೋಪಿಯಿಂದ ಕೋಟ್ಯಂತರ ಮೌಲ್ಯದ 21 ವಿವಿಧ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ. ಎಂಬಿಎ ಪದವೀಧರನಾಗಿರುವ ಆರೋಪಿ ತೆಲಂಗಾಣ ಪೊಲೀಸರಿಗೆ ಕ್ಯಾಚ್ ಮಿ ಇಫ್ ಯು ಕ್ಯಾನ್ ಎಂದು ಸವಾಲ್ ಹಾಕಿದ್ದನಂತೆ. 2003ರಿಂದ ಈವರೆಗೆ 60ಕ್ಕೂ ಅಧಿಕ ಕಾರುಗಳನ್ನ ಕಳ್ಳತನ ಮಾಡಿದ್ದಾನೆಂದು ತಿಳಿದುಬಂದಿದೆ. 2019ರ ಬಳಿಕ ಬೆಂಗಳೂರಿನಲ್ಲೂ ಸಾಲು ಸಾಲು ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಿಂದ ಡಿವೈಸ್​ಗಳನ್ನ ತರಿಸಿಕೊಂಡು, ಕಾರ್ ಸಾಫ್ಟ್​ವೇರ್​ಗಳನ್ನ ಹ್ಯಾಕ್ ಮಾಡಿ ಕಾರ್ ಅನ್ ಲಾಕ್ ಮಾಡುತ್ತಿದ್ದ. ಕೆಲವು ಕಾರ್​ಗಳ ಮ್ಯಾನ್ಯುಲ್ ಲಾಕ್​ಗಳ ದಾಖಲೆಯನ್ನು ಕದ್ದು ತಯಾರಿಸುತಿದ್ದ. ಕದ್ದ ಕಾರಿನಲ್ಲೇ ಆರೋಪಿ ರಾಜಸ್ಥಾನಕ್ಕೆ ತೆರಳುತಿದ್ದ ಎನ್ನಲಾಗಿದೆ. ಬಳಿಕ ಕದ್ದ ಕಾರುಗಳನ್ನ ಮಾಫಿಯಾ ಜನರಿಗೆ ಮಾರಾಟ ಮಾಡುತಿದ್ದ. ಅಮೃತಹಳ್ಳಿ ಪೊಲೀಸರು ರಾಜಸ್ಥಾನದಲ್ಲಿ ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

Share Post