BengaluruCrime

ಹನಿಟ್ರ್ಯಾಪ್‌ಗೆ ಬಿದ್ದ ಬಿಲ್ಡರ್‌; 7 ಲಕ್ಷ ರೂ. ಸುಲಿದ ಮಾಯಾಂಗನೆ

ಬೆಂಗಳೂರು; ಡೇಟಿಂಗ್ ಆ್ಯಪ್​ ಹುಚ್ಚಿಗೆ ಬಿದ್ದ ಬಿಲ್ಡರ್ ಒಬ್ಬನನ್ನು ಮಯಾಂಗನೆ ಒಬ್ಬಳು ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡಿದ್ದಾಳೆ. ಹಂತ ಹಂತವಾಗಿ ಏಳು ಲಕ್ಷ ರೂಪಾಯಿ ಪೀಕಿದ್ದಾಳೆ. ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ ಘಟನೆ ಸಂಬಂಧ ಬಿಲ್ಡರ್‌ ಜಯನಗರ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದಾರೆ.

ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ 2019 ರಲ್ಲಿ ಬಿಲ್ಡರ್​ಗೆ ಒಕೆಸಿ ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾಗಿದ್ದಾಳೆ. ನಂತರ ಇಬ್ಬರೂ ವಾಟ್ಸ್​ಆ್ಯಪ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ನಂತರ ಇಬ್ಬರ ನಡುವೆ ಸಲುಗೆ ಬೆಳೆದು ಶಿರಡಿ, ತಿರುಪತಿ ಎಲ್ಲಾ ಸುತ್ತಾಡಿದ್ದಾರೆ. ಇದೇ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ. ಇದಾದ ನಂತರ ವಂಚಕಿ, ಹಣ ಕೀಳಲು ಶುರು ಮಾಡಿದ್ದಾಳೆ. ತನ್ನ ಬಳಿ ವಿಡಿಯೋಗಳಿವೆ. ಅದನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಸಿ ಏಳು ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ. ಅಷ್ಟು ಸಾಲದು ಎಂಬಂತೆ ಮತ್ತೆ ಒಂದು ಫ್ಲಾಟ್‌ ಹಾಗೂ ಹಣ ಕೊಡುವಂತೆ ಪೀಡಿಸಿದ್ದಾಳೆ. ಇದರಿಂದ ಬೇಸತ್ತ ಬಿಲ್ಡರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Share Post