Bengaluru

ಕಾರ್ಮೋಡಗಳ ನಡುವೆ ಪುಸ್ತಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು: ಮಾನವೀಯತೆ ಎನ್ನುವುದು ಕಾರ್ಮೋಡಗಳ ನಡುವೆ ಇರುವ ಬೆಳ್ಳಿ ರೇಖೆಯಂತೆ. ಮಾನವೀಯತೆ ಹೆಚ್ಚಿದಷ್ಟು ವಿಶ್ವ ಸಹನೀಯವಾದ ಸ್ಥಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೋವಿಡ್ 19 ಸಂದರ್ಭದಲ್ಲಿ ಅದರ ವಿರುದ್ಧದ ಹೋರಾಟದ ಕಥೆಗಳ ಬಗ್ಗೆ ಅದಮ್ಯ ಚೇತನ ಹೊರತಂದಿರುವ ಕಾರ್ಮೋಡಗಳ ನಡುವೆ ಪುಸಕ್ತವನ್ನು ಲೋಕಾರ್ಪಣೆ ಮಾಡಿದ್ರು.

ಪ್ರತಿ ವಿಚಾರದಲ್ಲಿಯೂ ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕು ಎಂದ ಮುಖ್ಯಮಂತ್ರಿಗಳು, ದು:ಖದಲ್ಲಿಯೂ ಸಾಧಿಸಿ ಜಯಿಸಬಹುದು ಎಂಬ ಪಾಠವನ್ನು ಆಪತ್ಕಾಲ ನಮಗೆ ಪಾಠ ಕಲಿಸುತ್ತದೆ.  ಕೋವಿಡ್ ಸಂದರ್ಭದಲ್ಲಿ ಎಲೆಮರೆಕಾಯಿಯಂತೆ ಜನರ ಸಹಾಯಕ್ಕೆ ಅನೇಕರು ಮುಂದಾಗಿದ್ದರು. ಅವರ ಪೈಕಿ ಹಲವು ಕಥೆಗಳನ್ನು ಪುಸಕ್ತದಲ್ಲಿ ದಾಖಲಿಸಿರುವುದು ಶ್ಲಾಘನೀಯ. ಸಂಕಷ್ಟದ ಸಮಯದಲ್ಲಿ ಸಮಾಜ ಸ್ಪಂದಿಸಬೇಕು. ಈ ಕಾರಣಕ್ಕಾಗಿಯೇ ನಾಗರಿಕ ಸಂಘಗಳು ಹುಟ್ಟಿಕೊಳ್ಳಬೇಕು. ಜನಾಭಿಪ್ರಾಯ ರೂಪಿಸಲು, ನಾಗರಿಕ ಸಂಘಗಳ ಅಗತ್ಯವಿದೆ. ಅದಮ್ಯ ಚೇತನ ಭವಿಷ್ಯದ ನಾಗರಿಕ ಸಂಘವಿದ್ದಂತೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.

Share Post