BengaluruCrime

ಬೆಂಗಳೂರಿನ ಹದಿನೈದಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ!

ಬೆಂಗಳೂರು; ಶಾಲೆಗಳು, ಸರ್ಕಾರಿ ಕಚೇರಿಗಳು, ಕಂಪನಿಗಳು, ಬಸ್‌, ವಿಮಾನ ನಿಲ್ದಾಣಗಳಲ್ಲಿ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ಆಗಾಗ ಬರುತ್ತಲೇ ಇರುತ್ತವೆ. ಆದ್ರೆ ಪರಿಶೀಲನೆ ಮಾಡಿದ ನಂತರ ಅದು ಹುಸಿ ಕರೆ ಎಂಬುದು ಸಾಬೀತಾಗುತ್ತದೆ. ಹಾಗೆ ಹುಸಿ ಕರೆ ಮಾಡಿದವರು ಸಿಕ್ಕಿಬೀಳುತ್ತಾರೆ ಕೂಡಾ. ಪೊಲೀಸರ ಕೈಗೆ ಸಿಗುತ್ತೇವೆ ಎಂದು ಗೊತ್ತಿದ್ದರೂ ಅದೇನು ಹುಚ್ಚೋ ಏನೋ ಇಂತಹ ಬೆದರಿಕೆಗಳು ಮುಂದುವರೆಯುತ್ತಲೇ ಇವೆ. ಇಂದು ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.

ಬಸವೇಶ್ವರ ನಗರ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. 1 ವರ್ಷದಿಂದ ಹೀಗೆ ಬೆದರಿಕೆ ಇ-ಮೇಲ್‌ಗಳು ಬರುತ್ತಲೇ ಇಲ್ಲ. ಈ ಹಿಂದೆ ಬೆದರಿಕೆ ಹಾಕಿದ ಎಲ್ಲಾ ಪ್ರಕರಣಗಳಲ್ಲೂ ಆರೋಪಿಗಳು ಸಿಕ್ಕಿಬಿದ್ದಿದ್ದಾರಾಗಲೀ, ಈ ಶಾಲೆಗಳಿಗೆ ಬೆದರಿಕೆ ಹಾಕಿದವರು ತುಂಬಾ ಚಾಲಾಕಿಗಳಾಗಿದ್ದು, ಇದುವರೆಗೂ ಅವರ ಬಂಧನವಾಗಿಲ್ಲ. ಪೊಲೀಸರು ಹಿಂದೆ ಬಿದ್ದಿದ್ದಾರೆ ಎಂಬುದು ಗೊತ್ತಿದ್ದೂ ಅವರು, ಪದೇ ಪದೇ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ.

Share Post