BengaluruCrime

ಬಿಎಂಟಿಸಿಗೆ ಮತ್ತೊಂದು ಬಲಿ; ಚಾಲಕನಿಗೆ ಥಳಿಯ

ಬೆಂಗಳೂರು; ಕಾಮಾಕ್ಷಿಪಾಳ್ಯದ ಸುಮನಹಳ್ಳಿ ಬ್ರಿಡ್ಜ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದ್ರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಸ್‌ ಚಾಲಕನನ್ನು ಹಿಡಿದು ಥಳಿಸಿರುವ ಘಟನೆ ನಡೆದಿದೆ.

ಬೈಕ್‌ ಮುಂದೆ ಹೋಗುತ್ತಿದ್ದು, ಹಿಂದಿನಿಂದ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಇದ್ರಿಂದ ನೆಲಕ್ಕೆ ಬಿದ್ದ ಯುವಕನಿಗೆ ಗಂಭೀರವಾಗಿ ಹೆಚ್ಚು ರಕ್ತಸ್ರಾವವಾಗಿತ್ತು, ಇದ್ರಿಂದಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಬಸ್‌ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು, ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಅನಂತರ ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಆತನನನ್ನು ಒಪ್ಪಿಸಿದ್ದಾರೆ.

Share Post