BengaluruPolitics

Bhajrangdal issue; ಬಿಜೆಪಿ ಭಜರಂಗಿ ಅಸ್ತ್ರ; ಗುರುವಾರ ದೇಗುಲಗಳಲ್ಲಿ ಹನುಮಾನ್‌ ಚಾಲೀಸಾ ಪಠಣ..!

ಬೆಂಗಳೂರು; ಬಿಜೆಪಿ ಪಕ್ಷ ಭಾವನಾತ್ಮಕ ವಿಚಾರಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ. ಒಂದು ಸಣ್ಣ ವಿಚಾರ ಸಿಕ್ಕರೆ ಸಾಕು ಅದನ್ನು ಜನರ ಮನಸ್ಸಿನೊಳಗೆ ಹೊಕ್ಕೋವರೆಗೂ ಬಿಡೋದಿಲ್ಲ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡುತ್ತಾ ಪ್ರಧಾನಿ ಮೋದಿ ವಿಷ ಸರ್ಪ ಇದ್ದಂತೆ, ಮುಟ್ಟಿದರೆ ಮಷಾಷ್‌ ಎಂದು ಹೇಳಿದ್ದರು. ಇದನ್ನು ಮೋದಿ ಹಾಗೂ ಬಿಜೆಪಿ ನಾಯಕರು ಚುನಾವಣಾ ಪ್ರಚಾರದಲ್ಲಿ ಸಮರ್ಥವಾಗಿ ಬಳಸಿಕೊಂಡರು. ಇದರಿಂದಾಗಿ ಕಾಂಗ್ರೆಸ್‌ಗೆ ಸ್ವಲ್ಪ ಇರಿಸುಮುರಿಸಾಯಿತು. ಖರ್ಗೆಯವರು ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿ ನಾನು ಮೋದಿಯವರಿಗೆ ಹೇಳಲಿಲ್ಲ. ಬಿಜೆಪಿ ಪಕ್ಷಕ್ಕೆ ಹೇಳಿದ್ದು ಎಂದು ಸಮರ್ಥನೆ ಕೊಟ್ಟಿದ್ದರು. ಆದರೂ, ಬಿಜೆಪಿ ಈ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿತ್ತು. ಅದು ಬಿಜೆಪಿಗೆ ವರ್ಕೌಟ್‌ ಕೂಡಾ ಆಗಿತ್ತು.

ಇದೀಗ, ಬಿಜೆಪಿಗೆ ಭಜರಂಗದಳದ ಅಸ್ತ್ರ ಸಿಕ್ಕಿದೆ. ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಯಾವುದೇ ಧರ್ಮದ ಸಂಘಟನೆ ಅದು ಪಿಎಫ್‌ಐ ಆಗಿರಬಹುದು, ಭಜರಂಗ ದಳ ಆಗಿರಬಹುದು. ಜನ ಶಾಂತಿ ಹಾಳು ಮಾಡಲು ಹೊರಟರೆ ನಿಷೇಧಕ್ಕೆ ಸಿದ್ಧ ಎಂದು ಹೇಳಿತ್ತು. ಈಗಾಗಲೇ ಪಿಎಫ್‌ಐ ನಿಷೇಧ ಮಾಡಲಾಗಿದೆ. ಹೀಗಾಗಿ ಕಾಂಗ್ರೆಸ್‌ನವರು ಭಜರಂಗದಳವನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಸಿಡಿದೆದ್ದಿದೆ. ಈ ಮೂಲಕ ಹಿಂದೂಗಳ ಮತಗಳನ್ನು ಸೆಳೆಯೋದಕ್ಕೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್‌ ವಿವಾದ ಮೈಮೇಲೆ ಎಳೆದುಕೊಂಡಿರುವುದರಿಂದ ಬಿಜೆಪಿ ಅದನ್ನು ಪ್ಲಸ್‌ ಮಾಡಿಕೊಳ್ಳಲು ಹೊರಟಿದೆ. ಅದಕ್ಕಾಗಿ ಅದು ಉಯೋಗಿಸುತ್ತಿರುವ ಅಸ್ತ್ರವೇ ಹುಮಾನ್‌ ಚಾಲೀಸಾ ಪಠಣ.. ಇದೇ ಗುರುವಾರ ರಾಜ್ಯದ ಎಲ್ಲಾ ದೇಗುಲಗಳಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡುವುದರ ಮೂಲಕ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಬಿಜೆಪಿ ಮುಂದಾಗಿದೆ.

ಭಜರಂಗದಳ ಹಾಗೂ ಹಲವು ಹಿಂದೂ ಸಂಘಟನೆಗಳು ಈ ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ ನೀಡಿವೆ. ಮಂಗಳೂರಿನ ಮುಲ್ಕಿಯಲ್ಲಿ ಪ್ರಚಾರ ಭಾಷಣ ಮಾಡಿದ ಮೋದಿ, ಭಜರಂಗದಳದ ವಿಚಾರವನ್ನು ಸಮರ್ಥವಾಗಿಯೇ ಬಳಸಿಕೊಂಡರು. ಭಜರಂಗಬಲಿಗೆ ಜೈ ಎನ್ನುತ್ತಲೇ ತಮ್ಮ ಭಾಷಣ ಆರಂಭಿಸಿದರು. ಜನರಿಂದಲೂ ಭಜರಂಗಬಲಿಗೆ ಜೈ ಎಂದು ಕೂಗಿಸಿದರು. ಈ ನಡುವೆಯೇ ಹಿಂದೂ ಸಂಘಟನೆಗಳು ಗುರುವಾರ ಎಲ್ಲಾ ದೇಗುಲಗಳಲ್ಲಿ ಹನುಮಾನ್‌ ಚಾಲೀಸಾ ಪಠಣೆಗೆ ಕರೆ ನೀಡಿವೆ. ಗುರುವಾರ ಸಂಜೆ ಏಳು ಗಂಟೆಗೆ ಎಲ್ಲಾ ದೇಗುಲಗಳಲ್ಲೂ ಹನುಮಾನ್‌ ಚಾಲೀಸಾ ಪಠಣೆ ನಡೆಯಲಿದೆ.

ಈ ಬಗ್ಗೆ ಹಿಂದೂ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಜನಕ್ಕೆ ಕರೆ ಕೊಟ್ಟಿದ್ದಾರೆ. ನಾಳೆ ಸಂಜೆ ಏಳು ಗಂಟೆಗೆ ಎಲ್ಲಾ ದೇಗುಲಗಳಲ್ಲೂ ಹನುಮಾನ್‌ ಚಾಲೀಸಾ ಪಠಣ ಮಾಡಬೇಕೆಂದು ಹೇಳಿದ್ದಾರೆ. ಇದು ಜನರಿಗೆ ಕನೆಕ್ಟ್‌ ಆದರೆ ಕಾಂಗ್ರೆಸ್‌ಗೆ ಹೊಡೆತ ಬೀಳುವುದು ಗ್ಯಾರೆಂಟಿ. ಕಾಂಗ್ರೆಸ್‌ ಹೊಡೆತ ಕೊಡುವುದಕ್ಕಾಗಿಯೇ ಹನುಮಾನ್‌ ಪಠಣ ಮಾಡಲಾಗುತ್ತಿದೆ.

Share Post