BengaluruPolitics

ಅಮುಲ್‌ ಹಾಲು ರಾಜ್ಯಕ್ಕೆ ಎಂಟ್ರಿ ಹಿನ್ನೆಲೆ; ನಂದಿನಿ ಪಾರ್ಲರ್‌ಗೆ ಡಿಕೆಶಿ ಭೇಟಿ

ಹಾಸನ; ಗುಜರಾತ್‌ ನ ಅಮುಲ್‌ ಹಾಲು ರಾಜ್ಯಕ್ಕೆ ಎಂಟ್ರಿ ಕೊಡುತ್ತಿದೆ. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಕೂಡಾ ಇದರ ವಿರುದ್ಧ ನಿಂತಿದೆ. ನಂದಿನಿ ಹಾಲಿಗೆ ಸೆಡ್ಡು ಹೊಡೆಯಲು ಅಮುಲ್‌ ಹಾಲನ್ನು ಇಲ್ಲಿ ಪರಿಚಯಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಇಂದು ಹಾಸನಕ್ಕೆ ಭೇಟಿ ನೀಡಿದ್ದಾರೆ. ಹಾಸನದಲ್ಲಿ ಇಂದು ನಂದಿನಿ ಪಾರ್ಲರ್‌ಗೆ ಭೇಟಿ ಹಲವು ಉತ್ಪನ್ನಗಳನ್ನು ಖರೀದಿ ಮಾಡಿದರು.

ನಂದಿನ ಬಾದಾಮಿ ಹಾಲನ್ನು ಖರೀದಿ ಮಾಡಿ ಡಿ.ಕೆ.ಶಿವಕುಮಾರ್‌ ಅಲ್ಲೇ ಕುಡಿದರು. ಈ ಮೂಲಕ ನಂದಿನಿ ಉತ್ಪನ್ನಗಳನ್ನು ಬೆಂಬಲಿಸೋದಾಗಿ ಹೇಳಿದರು.

Share Post