Bengaluru

ಎರಡು ವರ್ಷವಾದರೂ ಪ್ರಕಟಿಸದ ಫಲಿತಾಂಶ; ಕೆಪಿಎಸ್‌ಸಿ ಮುಂದೆ ಅಭ್ಯರ್ಥಿಗಳ ಪ್ರೊಟೆಸ್ಟ್‌

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗಾಗಿ 3000 ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಆಕ್ರೋಶ ಇಂದು ಭುಗಿಲೆದ್ದಿದೆ. ಎರಡು ವರ್ಷವಾದರೂ ಫಲಿತಾಂಶ ಪ್ರಕಟಿಸದಿದ್ದುದರಿಂದ ಅಭ್ಯರ್ಥಿ ಇಂದು ಕೆಪಿಎಸ್‌ಸಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. 

ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಖಾಲಿ ಇರುವ  3,000ಕ್ಕೂ ಹೆಚ್ಚು ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಎರಡು ವರ್ಷದ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಆದ್ರೆ ಎರಡು ವರ್ಷವಾದರೂ ಫಲಿತಾಂಶ ಪ್ರಕಟಿಸಿಲ್ಲ.  ಇದ್ರಿಂದ ಆಕ್ರೋಶಗೊಂಡಿರುವ ಅಭ್ಯರ್ಥಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಉದ್ಯೋಗ ಸೌಧದ ಮುಂದೆ ಧರಣಿ ನಡೆಸಿದರು.

ಗೆಜೆಟೆಡ್‌ ಪ್ರೊಬೇಷನರಿ (ಜಿಪಿ) 106 ಹುದ್ದೆಗಳ ನೇಮಕಾತಿಯ ಮುಖ್ಯಪರೀಕ್ಷೆ, ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) 1,323, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಿರಿಯ ಎಂಜಿನಿಯರ್‌ 330, ಸಹಾಯಕ ಎಂಜಿನಿಯರ್‌ 660, ಗ್ರೂಪ್‌ ‘ಸಿ’ (ತಾಂತ್ರಿಕೇತರ) 387, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ (ಎಸಿಎಫ್‌) 16 ಹೀಗೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದು ಹಲವು ತಿಂಗಳುಗಳೇ ಕಳೆದಿವೆ. ಆದ್ರೆಫಲಿತಾಂಶಮಾತ್ರ ಪ್ರಕಟಿಸಿಲ್ಲ.

Share Post