BengaluruCrime

ನೇರವಾಗಿ ಅಂಗಡಿಗೇ ನುಗ್ಗಿದ ಗೂಡ್ಸ್‌ ವಾಹನ!; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

ಬೆಂಗಳೂರು; ಗೂಡ್ಸ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಅಂಗಡಿಗೇ ನುಗ್ಗಿಬಿಟ್ಟಿದೆ.. ವಾಹನ ನುಗ್ಗಿಬರುತ್ತಿರುವುದನ್ನು ನೋಡಿ ಅಂಗಡಿಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.. ಈ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.. ಬೆಂಗಳೂರಿನ ಸುಬ್ರಮಣ್ಯನಗರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ..

ಇಂದು ಮಧ್ಯಾಹ್ನ ಗೂಡ್ಸ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದೆ.. ಅದು ಒಮ್ಮಲೆ ಫುಟ್‌ಪಾತ್‌ಗೆ ನುಗ್ಗಿದೆ.. ಅಲ್ಲಿಂದ ದಾಟಿಕೊಂಡು ಅಂಗಡಿಯೊಂದಕ್ಕೆ ನುಗ್ಗಿಬಿಟ್ಟಿದೆ.. ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ.. ಘಟನೆಯಲ್ಲಿ ವ್ಯಕ್ತಿಯೊಬ್ಬ ಕಾಲು ಮುರಿದಿದೆ.. ಫುಟ್‌ಪಾತ್‌ನಲ್ಲಿ ಬೈಕ್‌ ನಿಲ್ಲಿಸುತ್ತಿದ್ದವನ ಮೇಲೆ ನುಗ್ಗಿದ್ದರಿಂದ ಆತನ ಕಾಲು ಮುರಿದಿದೆ ಎಂದು ಗೊತ್ತಾಗಿದೆ..

ಕೂಡಲೇ ಗಾಯಾಗೊಂಡ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post