BengaluruPolitics

11 ಸಚಿವರು ಲೋಕಸಭಾ ಅಖಾಡಕ್ಕೆ; ಏನಿದು ಕಾಂಗ್ರೆಸ್‌ ಲೆಕ್ಕಾಚಾರ..?

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇತ್ತ ಕರ್ನಾಟಕದಲ್ಲೂ ಸಿದ್ಧತೆ ಜೋರಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಹಾಲಿ ಒಂದು ಲೋಕಸಭಾ ಸ್ಥಾನ ಹೊಂದಿದೆ. ಬಿಜೆಪಿ 25 ಸಂಸದರನ್ನು ಹೊಂದಿದ್ದರೆ, ಜೆಡಿಎಸ್‌ ಒಬ್ಬ ಸಂಸದರನ್ನು ಹೊಂದಿದೆ. ಇನ್ನು ಪಕ್ಷೇತರರಾಗಿ ಗೆದ್ದಿದ್ದ ಸುಮಲತಾ ಅವರು ಈಗ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಕಾಂಗ್ರೆಸ್‌ ಶತಪ್ರಯತ್ನ ಮಾಡುತ್ತಿದೆ. ಆದ್ರೆ ಆಂತರಿಕ ಸಮೀಕ್ಷೆಯಲ್ಲಿ ಅವರಿಗೆ ವ್ಯತಿರಿಕ್ತ ರಿಸಲ್ಟ್‌ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಸಂಪುಟದಲ್ಲಿನ ಸಚಿವರನ್ನೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹನ್ನೊಂದು ಸಚಿವರು ಲೋಕಸಭಾ ಅಖಾಡಕ್ಕೆ..?

ನ್ಯೂಸ್‌ ಎಕ್ಸ್‌ ಕನ್ನಡ ಎರಡು ತಿಂಗಳ ಹಿಂದೆಯೇ ಇಂತಹದ್ದೊಂದು ಸುದ್ದಿ ಪ್ರಕಟಿಸಿತ್ತು. ಸುಮಾರು ಹತ್ತು ಸಚಿವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ನಾವು ಸುದ್ದಿ ಮಾಡಿದ್ದೆವು. ಈಗ ಅದು ನಿಜ ಆಗೋ ಸಾಧ್ಯತೆಯೇ ಹೆಚ್ಚಾಗಿದೆ. ಯಾಕಂದ್ರೆ 11 ಸಚಿವರನ್ನು ಲೋಕಸಭಾ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಬೇಕಾದರೆ ಸಚಿವರನ್ನು ಕಣಕ್ಕಿಳಿಸುವ ಅನಿವಾರ್ಯತೆ ಕಾಂಗ್ರೆಸ್‌ಗಿದೆ ಎನ್ನಲಾಗಿದೆ.

Exclusive; ರಾಜ್ಯದಿಂದ ಸಮರ್ಥರ ತಂಡ ಲೋಕಸಭೆಗೆ..!; 10 ಹಾಲಿ ಸಚಿವರು ಅಖಾಡಕ್ಕೆ..?

ಅಷ್ಟಕ್ಕೂ ಯಾವ ಸಚಿವರು ಎಲ್ಲಿ ಸ್ಪರ್ಧೆ..?

ಬೆಳಗಾವಿ – ಸತೋಶ್‌ ಜಾರಕಿಹೊಳಿ

ತುಮಕೂರು – ಕೆ.ಎನ್‌.ರಾಜಣ್ಣ

ಚಾಮರಾಜನಗರ (ಎಸ್‌ಸಿ) – ಹೆಚ್‌.ಸಿ.ಮಹದೇವಪ್ಪ

ಮಂಡ್ಯ – ಎನ್‌.ಚಲುವರಾಯಸ್ವಾಮಿ

ಬಳ್ಳಾರಿ – ಬಿ.ನಾಗೇಂದ್ರ

ಧಾರವಾಡ – ಸಂತೋಷ್‌ ಲಾಡ್‌

ಕೋಲಾರ (ಎಸ್‌ಸಿ) – ಕೆ.ಹೆಚ್‌.ಮುನಿಯಪ್ಪ

ಚಿತ್ರದುರ್ಗ – ಡಾ.ಜಿ.ಪರರಮೇಶ್ವರ್‌

ಬೆಂಗಳೂರು – ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ದಿನೇಶ್‌ ಗುಂಡೂರಾವ್‌

 

ಯಾರಿಗೆ ಯಾರಿಗೆ ಆಸಕ್ತಿ ಇದೆ..? ಯಾರಿಗೆ ಇಲ್ಲ..?

ಸ್ಪರ್ಧೆಗೆ ಕೆ.ಎನ್‌.ರಾಜಣ್ಣ, ಬಿ.ನಾಗೇಂದ್ರ ರೆಡಿ
ಹೈಕಮಾಂಡ್‌ ಹೇಳಿದರೆ ಸ್ಪರ್ಧೆ ಮಾಡಲಿರುವ ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ
ಪುತ್ರನಿಗೆ ಟಿಕೆಟ್‌ ಕೇಳುತ್ತಿರುವ ಸಚಿವ ಸತೀಶ್‌ ಜಾರಕಿಹೊಳಿ

ಮಹದೇವಪ್ಪ, ಕೆ.ಹೆಚ್‌.ಮುನಿಯಪ್ಪ ಕೂಡಾ ಪುತ್ರರಿಗೆ ಟಿಕೆಟ್‌ ಕೇಳ್ತಿದ್ದಾರೆ

ಸಚಿವ ರಾಮಲಿಂಗಾರೆಡ್ಡಿ ಅವರು ಕೂಡಾ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್‌ ಕೇಳ್ತಿದ್ದಾರೆ

 

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕೇಂದ್ರ ಸಚಿವರನ್ನೇ ಕಣಕ್ಕಿಳಿಸಿತ್ತು. ಹೀಗಾಗಿ ಮೂರು ರಾಜ್ಯಗಳಲ್ಲಿ ಬಾರಿ ಬಹುಮತ ಪಡೆಯೋದಕ್ಕೆ ಬಿಜೆಪಿಗೆ ಸಾಧ್ಯವಾಯಿತು. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕಿಳಿಸಲು ಮುಂದಾಗಿದೆ. ಹತ್ತ ಸಚಿವರ ಪಟ್ಟಿ ರೆಡಿ ಮಾಡಲು ರಾಜ್ಯ ನಾಯಕರಿಗೆ ಹೈಕಮಾಂಡಗ್‌ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

 

Share Post