ಬನ್ನೇರುಘಟ್ಟದಲ್ಲಿ ಏಳು ಚಿರತೆ ಮರಿ ಸಾವು
ಬನ್ನೇರುಘಟ್ಟ; ಬನ್ನೇರುಘಟ್ಟ ಉದ್ಯಾನದಲ್ಲಿ ಏಳು ಚಿರತೆ ಮಾರಿಗಳು ಸಾವನ್ನಪ್ಪಿವೆ. ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ಎಂಬ ವೈರಸ್ ಗೆ ತುತ್ತಾಗಿ ಈ ದುರ್ಘಟನೆ ನಡೆದಿದೆ.
ಚಿರತೆ ಸೇರಿ ಬೆಕ್ಕಿನ ಎಲ್ಲಾ ಪ್ರಬೇಧಗಳಲ್ಲಿ ಈ ವೈರಸ್ ಬಹುಬೇಗ ಹರಡಲಿದೆ. ಈ ಸೋಂಕು ತಗುಲಿದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಿಲ್ಲ. ರಕ್ತವಾಂತಿಯಾಗಿದ್ದರಿಂದ ಚಿರತೆ ಮರಿಗಳು ಅಸ್ವಸ್ಥಗೊಂಡಿದ್ದವು.
11 ಮರಿಗಳು ಅಸ್ವಸ್ಥಗೊಂಡಿದ್ದು ಇದರಲ್ಲಿ 7 ಚಿರತೆಗಳು ಮೃತಪಟ್ಟಿವೆ.