BengaluruLifestyle

ಬಿಎಂಟಿಸಿ ಬಸ್‌ ಚಾಲಕನ ಮೇಲೆ ಚಿರತೆ ಅಟ್ಯಾಕ್‌..!; ಬಸ್‌ಗೆ ನುಗ್ಗಿದ ಕಾಡುಮೃಗ!

ಬೆಂಗಳೂರು; ಬಿಎಂಟಿಸಿ ಬಸ್‌ ಚಾಲಕನ ಮೇಲೆ ಚಿರತೆಯೊಂದತೆ ಅಟ್ಯಾಕ್‌ ಮಾಡಿರುವ ಘಟನೆ ಬೆಂಗಳೂರಿನ ತುರಹಳ್ಳಿ ಫಾರೆಸ್ಟ್‌ನಲ್ಲಿ ನಡೆದಿದೆ.. ಇದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೂ ತಲೆನೋವು ಶುರು ಮಾಡಿದೆ..

ಇದನ್ನೂ ಓದಿ; ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?

 

ಬಸ್‌ ಕೆಳಗೆ ತೂರಿದ್ದ ಚಿರತೆ;

ಚಿರತೆ ಹಾಗೂ ಅದರ ಮರಿ ನಿಂತಿದ್ದ ಬಿಎಂಟಿಸಿ ಬಸ್‌ ಕೆಳಗೆ ತೂರಿದ್ದವು.. ಬಸ್‌ನಲ್ಲಿ ಪ್ರಯಾಣಿಕರು ಕೂಡಾ ಇದ್ದರು.. ಇದನ್ನು ಬಸ್‌ ಕೆಳಗೆ ಏನೂ ಇದ್ದದ್ದನ್ನು ಗಮನಿಸಿದ ಬಸ್‌ ಚಾಲಕ ಕೆಳಗೆ ನೋಡಿದ್ದೇವೆ.. ಆಗ ಅಲ್ಲಿ ಚಿರತೆ ಮರಿ ಕಾಣಿಸಿದೆ.. ಚಾಲಕ ಅಚ್ಚರಿಕೊಂಡು ಅದಕ್ಕೆ ನೀರು ಕುಡಿಸಲು ಎತ್ತಿಕೊಂಡಿದ್ದಾರೆ.. ಈ ವೇಳೆ ಅದೆಲ್ಲಿತ್ತೋ ತಾಯಿ ಚಾಲಕನ ಮೇಲೆ ಅಟ್ಯಾಕ್‌ ಮಾಡಿದೆ.. ಕಿರುಚಿಕೊಳ್ಳುವಷ್ಟರಲ್ಲಿ ಅದು ಎಸ್ಕೇಪ್‌ ಆಗಿದೆ..

ಇದನ್ನೂ ಓದಿ; ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

ಪ್ರಯಾಣಿಕರು ಇಳಿಯದಂತೆ ಸೂಚಿಸಿದ ಚಾಲಕ;

ಬಿಎಂಟಿಸಿ ಬಸ್‌ ಕೆಂಗೇರಿಯಿಂದ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಓಡಾಡುತ್ತದೆ.. ಇದೇ ಮಾರ್ಗದಲ್ಲಿ ತುರಹಳ್ಳಿ ಫಾರೆಸ್ಟ್‌ ಬರುತ್ತದೆ.. ಅಲ್ಲಿ ಈ ಚಿರತೆ ಹಾಗೂ ಮರಿ ಕಾಣಿಸಿದೆ.. ಬಸ್‌ ಕೆಳಗೆ ಚಿರತೆ ಮರಿ ಮಾತ್ರ ಇತ್ತು.. ಹೀಗಾಗಿ ಚಾಲಕ ಕರುಣೆಯಿಂದ ಅದನ್ನು ಎತ್ತಿಕೊಂಡು ನೀರು ಕುಡಿಸಲು ಮುಂದಾಗಿದ್ದಾರೆ.. ಈ ವೇಳೆ ಚಿರತೆ ದಾಳಿ ಮಾಡಿದೆ.. ಆದರೂ ಕೂಡಾ ಚಾಲಕ ಧೈರ್ಯದಿಂದ ಅದನ್ನು ಎದುರಿಸಿದ್ದಾರೆ.. ಜೊತೆಗೆ ಪ್ರಯಾಣಿಕರು ಯಾರೂ ಇಳಿಯದಂತೆ ಸೂಚಿಸಿದ್ದು, ಇದರಿಂದಾಗಿ ಯಾವುದೇ ಅನಾಹುತವಾಗಿಲ್ಲ..

ಇದನ್ನೂ ಓದಿ; ಬರ್ತ್‌ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!

ಮರಿಯನ್ನು ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ;

ಇನ್ನು ದಾಳಿ ಮಾಡಿದ ಚಿರತೆ ಜನರನ್ನು ನೋಡಿ ಭಯಬಿದ್ದು ಅಲ್ಲಿಂದ ಓಡಿಹೋಗಿದೆ.. ಆದ್ರೆ ಚಿರತೆ ಮರಿ ಅಲ್ಲೇ ಇತ್ತು.. ಅರಣ್ಯ ಸಿಬ್ಬಂದಿಗೆ ಕರೆ ಮಾಡಿ ಕರೆಸಲಾಯಿತು.. ಅರಣ್ಯ ಸಿಬ್ಬಂದಿ ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.. ಆದ್ರೆ ಚಿರತೆ ಮಾತ್ರ ಓಡಿಹೋಗಿದೆ..

ಚಿರತೆ ಹುಡುಕುವುದೇ ದೊಡ್ಡ ಸವಾಲು;

ಮಗುವನ್ನು ದೂರ ಮಾಡಿಕೊಂಡಿರುವುದರಿಂದ ಚಿರತೆ ಆಕ್ರೋಶಗೊಂಡಿರುತ್ತದೆ.. ಅದು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.. ಹೀಗಾಗಿ ಅರಣ್ಯ ಸಿಬ್ಬಂದಿ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ.. ಸಂಜೆಯಾಗಿರುವುದರಿಂದ ಸುಮ್ಮನೆ ಬಿಡಲೂ ಆಗುವುದಿಲ್ಲ.. ಹುಡುಕುವುದಕ್ಕೂ ಆಗುವುದಿಲ್ಲ ಎನ್ನುವ ಸ್ಥಿತಿ ಅವರದ್ದು.. ಅಂದಹಾಗೆ ಮೊನ್ನೆ ಮೊನ್ನೆಯಷ್ಟೇ ಎಸ್ಆರ್​ಆರ್​​ ಲೇಔಟ್​ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಹೀಗಾಗಿ ಆನೇಕಲ್​​ನ ನಿವಾಸಿಗಳಿಗೆ ಟೆನ್ಷನ್ ಶುರುವಾಗಿತ್ತು.

ಇದನ್ನೂ ಓದಿ; Crime; ಹೈಕೋರ್ಟ್‌ನಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ; ಮುಂದೇನಾಯ್ತು..?

 

 

Share Post