BengaluruCinema

ಬಿಗ್‌ ಬಾಸ್‌ ದಿವ್ಯಾ ಸುರೇಶ್‌ಗೆ ಅಪಘಾತ

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ ೮ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್‌ ಅವರಿಗೆ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಳೆದ ವಾರವಷ್ಟೇ ದಿವ್ಯಾ ಅವರು ಬ್ರಿಗೇಡ್‌ ರೋಡ್‌ನಲ್ಲಿ ಗಲಾಟೆ ಒಂದರ ಮೂಲಕ ಸುದ್ದಿ ಆಗಿದ್ದರು.

ಕನ್ನಡದ ಬಿಗ್‌ ಬಾಸ್‌ ೮ರ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್‌ ಅವರು ಫಿನಾಲೆ ಕೂಡ ಪ್ರವೇಶ ಮಾಡಿದ್ದರು. ಸೋಮವಾರ ಬೈಕ್‌ನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹೆಚ್ಚು ಗಂಭೀರ ಗಾಯಗಳು ಸಂಭವಿಸಿಲ್ಲ. ಮುಖದ ಮೇಲೆ ದಿವ್ಯಾಗೆ ಸಣ್ಣ ಗಾಯ ಆಗಿದೆ. ಪ್ರಾಣಾಪಾಯದಿಂದ ದಿವ್ಯಾ ಸುರೇಶ್ ಪಾರಾಗಿದ್ದಾರೆ

ಸಣ್ಣ ಪುಟ್ಟ ಗಾಯಗಳಷ್ಟೇ ಆಗಿರುವ ಕಾರಣ ದಿವ್ಯಾ ಸುರೇಶ್‌ ಅವರು ಚಿಕಿತ್ಸೆ ಪಡೆದು ಮನೆಯಲ್ಲೇ ಇದ್ದಾರೆ. ಕೊರೊನಾ ವ್ಯಾಕ್ಸಿನ್‌ ಪಡೆದು ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ.

Share Post