ಮುಂದುವರಿದ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧ
ದೆಹಲಿ: ಜಗತ್ತಿನಾದ್ಯಂತ ಕೊರೊನಾ ಹಾವಳಿ ಮತ್ತೆ ಶುರುವಾಗಿದೆ. ಈ ಹಿನ್ನೆಲೆ ಅಂತರಾಷ್ಟ್ರೀಯ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಫೆಬ್ರವರಿ 28 ರವೆರೆಗ ಮುಂದುವರೆಯಲಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಈ ಮೊದಲು ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸುವ ಮೊದಲು ಅಂದರೆ 2020ರ ಮಾರ್ಚ್ 23ರಿಂದ ಭಾರತದಕ್ಕೆ ಬರುತ್ತಿದ್ದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದನ್ನು ಮತ್ತೆ ಮುಂದುವರೆಸುವುದಾಗಿ ಡಿಜಿಸಿಎ ತಿಳಿಸಿದೆ.
ಆದರೆ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ಸಂಚರಿಸುತ್ತಿರುವ ವಿಮಾನಗಳು ಹಾಗೂ ಒಂದೇ ಮಾತರಂ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಗಳಿಗೆ ಮಾತ್ರ ಅನುಮತಿ ನೀಡಿಲಾಗಿದ್ದು ಉಳಿದೆಲ್ಲಾ ವಾಣಿಜ್ಯ ಪ್ರಯಾಣಿಕ ವಿಮಾನಗಳ ಮೇಲಿನ ನಿರ್ಬಂಧ ಮುಂದುವರೆಲಿದೆ.
ಕಳೆದ ವರ್ಷ ಅಂದ್ರೆ ಡಿಸೆಂಬರ್ 15, 2021ರಲ್ಲಿ ಎಲ್ಲಾ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ನಿರ್ಧಾರ ಮಾಡಿತ್ತು. ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಹರಡುತ್ತಿದ್ದ ಬೆನ್ನಲ್ಲೇ ಕೇಂದ್ರ ತಮ್ಮ ನಿರ್ಧಾರವನ್ನು ಹಿಂಪಡೆದುಕೊಂಡಿದೆ.