ಗೂಗಲ್ ಮೀಟ್‌ನಲ್ಲಿ ಮದುವೆ, ಜೊಮಾಟೊ ಮೂಲಕ ಊಟ: ವರ್ಚುವಲ್ ಮದುವೆ
ಪಶ್ಚಿಮ ಬಂಗಾಳ: ಸಾಮಾನ್ಯವಾಗಿ ಮದುವೆ ಅಂದ್ರೆ ಮನೆ ಮುಂದೆ ಚಪ್ಪರ, ಅಂಗಳ ಪೂರ್ತಿ ದೊಡ್ಡ ರಂಗೋಲಿ, ಮನೆ ತುಂಬಾ ಬಂಧು-ಬಳಗ, ಅಂಗ ರಂಗ ವೈಭವ ಇರುತ್ತೆ. ಆದ್ರೆ ಈಗ ಮದುವೆ ಅಂದ್ರೆ 10,20,50,100ಜನರಿಗೆ ಮಾತ್ರ ಅವಕಾಶ ಕಲ್ಪಿಸಿದ್ದಾರೆ. ಅದಕ್ಕೆ ಈ ಕೊರೊನಾ ಎಂಬ ಹೆಮ್ಮಾರಿ ಕಾರಣ, ಕೋವಿಡ್ ಮಾರಣಾಂತಿಕ ರೋಗ ಬಂದಾಗಿನಿಂದ ಮದುವೆ ಶುಭ ಸಮಾರಂಭಗಳಿಗೆ ಜನರ ಭಾಗವಹಿಸುವಿಕೆಗೆ ಸರ್ಕಾರ ಬ್ರೇಕ್ ಹಾಕಿದೆ. ಇನನು ಸರ್ಕಾರ ಸೂಚಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದಕ್ಕೆ ಉದಾಹರಣೆಯೆಂಬಂತೆ ಪಶ್ಚಿಮ ಬಂಗಾಳದಲ್ಲಿ ಒಂದು ಜೋಡಿ ಡಿಜಿಟಲ್ ಮೂಲಕ ಮದುವೆ ಆಗೋದಕ್ಕೆ ನಿಶ್ಚಯ ಮಾಡಿದ್ದಾರೆ.
ಸಂದೀಪನ್ ಹಾಗೂ ಅಧಿತಿ ಎಂಬ ಜೋಡಿ ಗೂಗಲ್ ಮೀಟ್‌ನಲ್ಲಿ ಮದುವೆಯಾಗಲು ನಿರ್ಧರ ಮಾಡಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಮದುವೆಗೆ 450ಜನರನ್ನು ಮದುವೆಗೆ ಆಹ್ವಾನ ನೀಡಿದ್ದು ಅದೂ ಗೂಗಲ್ ಮೀಟ್‌ನಲ್ಲಿ ಎಂದು ವರ ಸಂಸೀಪನ್ ತಿಳಿಸಿದ್ದಾರೆ. ಇದಕ್ಕೆ ಟೆಕ್ನಿಕಲ್ ಟೀಂ ಅನ್ನು ನೇಮಕ ಮಾಡಿದ್ದಾರೆ. ಮದುವೆಗೆ ಗೂಗಲ್ ಮೀಟ್‌ನಲ್ಲಿ ಭಾಗಿಯಾಗುವವರ ಮನೆಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಜೊಮಾಟೋ ಮೂಲಕ ಅವರವರ ಮನೆಗಳಿಗೆ ಊಟವನ್ನು ತಲುಪಿಸುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ ಎನ್ನಲಾಗಿದೆ.
ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಇದೊಂದೆ ಮಾರ್ಗ, ಜೊತೆಗೆ ಎಲ್ಲರೂ ಮದುವೆಗೆ ಸಹ ಹಾಜರಾದಂತೆ ಇರುತ್ತೆ. ಮುಂದೆ ಈ ಪದ್ದತಿ ಜಾರಿಗೆ ಬಂದ್ರೂ ಬರಬಹುದು ಅಂತಿದಾರೆ ನವಜೋಡಿ. ಅಬ್ಬಬ್ಬಾ ಮದುವೆ ಅಂದ್ರೆ ಕಳೆಗಟ್ಟಿದ ವಾತಾವರಣ ಇರುವ ಸನ್ನಿವೇಶ ಈಗ ಸಿನಿಮಾ ನೋಡಿದಂತೆ ಮೊಬೈಲ್‌ಗಳಲ್ಲಿ ನೋಡುವ ಪರಿಸ್ಥಿತಿ ಬಂದುಬಿಟ್ರೆ ದೇವ್ರೇ ಗತಿ ಅಂತಾರೆ ನೆಟ್ಟಿಗರು.