CrimeDistricts

ವರದಕ್ಷಿಣೆಗಾಗಿ ಪತ್ನಿಯನ್ನೇ ಬ್ಲಾಕ್‌ ಮೇಲ್‌ ಮಾಡಿದ ಕಿರಾತಕ ಪತಿ

ಶಿವಮೊಗ್ಗ: ವರದಕ್ಷಿಣೆ ಸಾಮಾಜಿಕ ಪಿಡುಗು ಎಂದು ಭಾವಿಸಿ ಅದನ್ನು ತೊಲಗಿಸಿದ್ದರೂ ಸಹ ವರದಕ್ಷಿಣೆ ಕಿರುಕುಳಗಳು ಕಡಿಮಾಯಾಗುತ್ತಲೇ ಇಲ್ಲ. ಇನ್ನೂ ಹಲವೆಡೆ ಹಣಕ್ಕಾಗಿ ಪೀಡಿಸುವ, ಕಿರಿಕುಳ ಕೊಟ್ಟು ಕೊಲೆ ಮಾಡಿರುವ ಘಟನೆಗಳೂ ಬೆಳಕಿಗೆ ಬಂದಿವೆ. ಅದರ ಸಾಲಿನಲ್ಲಿ ಒಬ್ಬ ಸೈಕೋಪಾತ್‌ ಗಂಡ ತನ್ನ ಪತ್ನಿಯೊಂದಿಗೆ ಬೆತ್ತಲೆ ವಿಡಿಯೋವನ್ನು ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಹಣ ತರದೆ ಹೋದರೆ ನಗ್ನ ವಿಡಿಯೋವನ್ನು ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇತ್ತ ಗಂಡನ ಮನೆಯವರ ಕಿರುಕುಳ ತಾಳಲಾರದೆ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿಳಿದ್ದಾಳೆ. ಎಂಟು ತಿಂಗಳ ಹಿಂದೆ ಸಲ್ಮಾನ್‌ ಜೊತೆ ಸಂತ್ರಸ್ತೆಯ ಮದುವೆಯಾಗಿತ್ತು. ಮದುವೆ ವೇಳೆ ಕೊಡಬೇಕಿದ್ದ ಅಷ್ಟೂ ವರದಕ್ಷಿಣೆ ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಹಲವಾರು ಬಾರಿ ರಾಜಿ ಸಂಧಾನಗಳೂ ಸಹ ನಡೆದಿವೆ. ಆದರೆ ದುರಾಸೆ ಬುರುಕ ಗಂಡನ ಮನೆಯವರು ಮತ್ತೆ ವರದಕ್ಷಿಣೆ ತರುವಂತೆ ಕೀಳು ಮಟ್ಟಕ್ಕಿಳಿದು ಹಿಂಸೆ ನೀಡ್ತಿದ್ದಾರೆ. ಈ ವಿಚಾರವಾಗಿ ಸಂತ್ರಸ್ತ ಮಹಿಳೆ ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪತಿ    ಸಲ್ಮಾನ್‌, ಅತ್ತೆ ಸಾಹಿರಾ, ಮಾವ ಶೌಕತ್‌ ಖಾನ್, ನಾದಿನಿ ಸಮೀನಾ ವಿರುದ್ಧ  ಮಹಿಳೆ ದೂರು ದಾಖಲಿಸಿದ್ದಾರೆ.

Share Post