ಏರ್ ಇಂಡಿಯಾ ವಿರುದ್ಧ ಪ್ರಯಾಣಿಕರ ಅಸಮಾಧಾನ
ಬೆಂಗಳೂರು: ಏರ್ ಇಂಡಿಯಾ ಇತ್ತೀಚೆಗೆ ಒಂದಿಲ್ಲೊಂದು ಆರೋಪದಲ್ಲಿ ಸುದ್ದಿಯಾಗುತ್ತಲೇ ಇದೆ. ತಾಂತ್ರಿಕ ಕಾರಣ, ಅಥವಾ ಮತ್ತೊಂದು ಕಾರಣ ನೀಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡ್ತಿದಾರೆ. ಇಂದು ಮತ್ತೊಂದು ಆರೋಪ ಏರ್ ಇಂಡಿಯಾ ಲಿಸ್ಟ್ಗೆ ಸೇರ್ಪಡೆಯಾಗಿದೆ. ತಾಂತ್ರಿಕ ಕಾರಣದಿಂದ ಸರಿಯಾದ ಸಮಯಕ್ಕೆ ಟೇಕಾಫ್ ಆಗದೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಯುವ ಸುಮಾರು ಐದು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಏರ್ಪಾಡಾದ ಘಟನೆ ಬೆಂಗಳೂರಿನ ಕೆಐಎಎಲ್ನಲ್ಲಿ ನಡೆದಿದೆ.
ಕೆಐಎಎಲ್ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಮಧ್ಯಾಹ್ನ 2 ಗಂಟೆಗೆ ಟೇಕಾಫ್ ಆಗಬೇಕಿದ್ದ AI 175 ವಿಮಾನ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಸಂಜೆವರೆಗೂ ವಿಮಾನ ಹಾರಟವಿಲ್ಲದೆ ಸರಿಯಾದ ಸಮಯಕ್ಕೆ ತಾವು ಸೇರಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವಿಮಾನ ನಿಲ್ದಾಣದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿಭಟನೆ ಮುಂದಾದ್ರು.
ಕೇವಲ ವಿಮಾನ ಹಾರಾಟ ಮಾತ್ರವಲ್ಲದೆ ಸರಿಯಾದ ಸೌಲಭ್ಯ ನೀಡ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಊಟ, ತಿಂಡಿ, ಮೂಲಭೂತ ಸೌಕರ್ಯಗಳ ಕೊರತೆ ಏರ್ ಇಂಡಿಯಾದಲ್ಲಿ ಹೆಚ್ಚಾಗಿದೆ ಎಂದು ಘೋಷನೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.