ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್: ನೇಮಕಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಒಂದು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಮಾಡ್ತಿದ್ದ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಕಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು, ಜನವರಿ 31ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ. 2021-22ನೇ ಸಾಲಿನ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರ ಅನುಮತಿ ನೀಡಿದೆ.
ನೇಮಕಾತಿ ಜೊತೆಗೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೂ ಶಿಫಾರಸು ಮಾಡಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉಪನ್ಯಾಸಕರ ಹೋರಾಟದ ಫಲವಾಗಿ ಶಿಫಾರಸುಗಳಿಗೆ ಸಮ್ಮತಿ ಸೂಚಿಸುವ ಕಡತವನ್ನು ಮುಖ್ಯಮಂತ್ರಿ ಜ.14 ವಿಲೇವಾರಿ ಮಾಡಿದರು. ಇದರನ್ವಯ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಯುಜಿಸಿ ನಿಯಮಗಳಿಗನುಸಾರವಾಗಿ. ಈವರೆಗೆ ₹ 13,000 ವೇತನ ಪಡೆಯುತ್ತಿದ್ದವರಿಗೆ ₹ 32,000 ಹೆಚ್ಚಳ ಮಾಡಲಾಗಿದೆ. ₹ 11,000 ವೇತನ ಪಡೆಯುತ್ತಿದ್ದವರು ₹ 28,000 ಪಡೆಯಲಿದ್ದಾರೆ. ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಈ ಬಗ್ಗೆ ಜನವರಿ 14ರಂದು ಟ್ವೀಟ್ ಮಾಡಿ ಹಾರೈಸಿದ ಬೊಮ್ಮಾಯಿಯವರು, ಅತಿಥಿ ಉಪನ್ಯಾಸಕರಿಗೆ ಇದು ಸಂಕ್ರಾಂತಿ ಹಬ್ಬಕ್ಕೆ ಸರ್ಕಾರದ ಉಡುಗೊರೆ ಎಂದು ಶುಭ ಕೋರಿದ್ದಾರೆ.
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ.
— Basavaraj S Bommai (@BSBommai) January 14, 2022