International

ಲಸಿಕೆ ಮತ್ತು ಮಾಸ್ಕ್‌ ಜಾಗೃತಿ ಮೂಡಿಸಿದ ಗೂಗಲ್‌ ಡೂಡಲ್

ನವದೆಹಲಿ : ಓಮಿಕ್ರಾನ್‌ ಮತ್ತು ಕೊರೊನಾ ಸೇರಿ ಮೂರನೇ ಅಲೆ ವಿಶ್ವದಲ್ಲೆಡೆ ವ್ಯಾಪಿಸುತ್ತಿದೆ. ಆತಂಕದಲ್ಲಿರುವ ಜಗತ್ತಿಗೆ ಗೂಗಲ್‌ ಲಸಿಕೆಯ ಮಹತ್ವ ಸಾರಲು ವಿಭಿನ್ನ ಮಾರ್ಗ ಅನುಸರಿಸಿದೆ. ಗೂಗಲ್‌ ತನ್ನ ಡೂಡಲ್‌ ಮೂಲಕ ಕೊರೊನಾ ಲಸಿಕೆ ಜಾಗೃತಿ ಮೂಡಿಸುತ್ತಿದೆ.

ಕೊರೊನಾ ಸಮಯದಲ್ಲಿ ಸುರಕ್ಷಿತವಾಗಿರಬೇಕು, ಸುರಕ್ಷತೆಗೆ ಮಾಸ್ಕ್‌ ಧರಿಸಬೇಕು, ಲಸಿಕೆ ಹಾಕಿಸಬೇಕು ಎಂಬುದನ್ನು ಗೂಗಲ್‌ ಡೂಡಲ್‌ ಹೇಳುತ್ತಿದೆ. ಗೂಗಲ್‌ನ ಎಲ್ಲಾ ಅಕ್ಷರಗಳು ಇಂದು ಮಾಸ್ಕ್‌ ಹಾಕಿಕೊಂಡಿವೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಕೂಡ ಮಾಡುವ ಮೂಲಕ ಗೂಗಲ್‌ ಡೂಡಲ್‌ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ.

Share Post