ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಪಾರಂಪರಿಕ ಕಟ್ಟಡ
ಹೈದರಾಬಾದ್: ಬ್ರಿಟೀಷರ ಕಾಲದಲ್ಲಿ ಕಟ್ಟಿದ್ದ ಹೈತಿಹಾಸಿಕ ಕಟ್ಟಡವೊಂದು ಬೆಂಕಿಯ ಕೆನ್ನಾಲಿಗೆಗೆ ಸುಟ್ಟ ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಪಾರಂಪರಿಕ ಕಟ್ಟಡಕ್ಕೆ ಬೆಂಕಿ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಆದರೆ ಆ ಹೊತ್ತಿಗಾಗಲೇ ಹೆಚ್ಚಾಗಿ ಮರಮುಟ್ಟುಗಳಿಂದ ತಯಾರು ಮಾಡಿದ್ದ ಕಟ್ಟಡವಾಗಿದ್ದರಿಂದ ಅರ್ಧ ಸುಟ್ಟು ಬೂದಿಯಾಗಿತ್ತು. 1878ರಲ್ಲಿ ಬ್ರಿಟೀಷರು ಈ ಕ್ಲಬ್ ಅನನು ಕಟ್ಟಿಸಿದ್ದರು. 144ವರ್ಷಗಳ ಇತಿಹಾಸ ಈ ಕಟ್ಟಡಕ್ಕಿದೆ. ಎಂಟು ಸಾವಿರ ಸದಸ್ಯರು ಈ ಕ್ಲಬ್‌ನ ಸದಸ್ಯರಾಗಿದ್ದಾರೆ ಎಂಬ ಮಾಹಿತಿಯಿದೆ.
ಬೆಳಗಿನ ಜಾವ 3.15ಕ್ಕೆ ಬೆಂಕಿ ಬಿದ್ದರುವ ಸುದ್ದಿ ತಿಳಿದ ಕೂಡಲೇ ನಾವು ಏಳು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿಕೊಡಲಾಯಿತು. ಛಾವಣಿ ಸೇರಿದಂತೆ ಪೀಠೋಪಕರಣಗಳು ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಧುಸೂದನ್ ರಾವ್ ತಿಳಿಸಿದ್ದಾರೆ.