ಮಕ್ಕಳ ದುರಂತ ಸಾವಿನ ವರದಿ ಕೇಳಿದ ಆರೋಗ್ಯ ಸಚಿವ
ಬೆಳಗಾವಿ: ಬ್ರಿಮ್ಸ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದ ಮೂರು ಕಂದಮ್ಮಗಳ ಸಾವಿನ ಬಗ್ಗೆ ವರದಿ ನೀಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಳಗಾವಿ ಡಿಹೆಚ್ಓ ಶಶಿಕಾಂತ್ ಮುನ್ಯಾಳಗೆ ಸೂಚನೆ ನೀಡಿದ್ದಾರೆ.
ಮೂರು ದಿನಗಳ ಹಿಂದೆ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ವ್ಯಾಕ್ಸಿನ್ ನೀಡಿದ್ರು. ಬಳಿಕ ಮಕ್ಕಳಿಗೆ ವಾಂತಿ ಭೇದಿ ಶುರುವಾಗಿದೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ರೂ ಪ್ರಯೋಜನವಾಘಲಿಲ್ಲ. ನಮ್ಮ ಮಕ್ಕಳು ಬದುಕುಳಿಯಲಿಲ್ಲ ಎಂದು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ನೀಡಿದ ಇಂಜೆಕ್ಷನ್ ಕಾರಣ ಎಂದು ಮಕ್ಕಳ ಪೋಷಕರು ಆರೋಪಿಸುತ್ತಿದ್ದಾರೆ.
ಹೆತ್ತವರ ಆರೋಪಕ್ಕೆ ಸ್ಪಂದಿಸಿದ ಆರೋಗ್ಯ ಸಚಿವ ಸುಧಾಕರ್ ದುರಂತದ ಬಗ್ಗೆ ಮಾಹಿತಿ ನೀಡಲು ಆದೇಶಿಸಿದ್ದೇನೆ. ಮಕ್ಕಳ ಸಾವಿಗೆ ಲಸಿಕೆ ಕಾರಣನಾ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯತೆಯಿಂದ ಹೀಗಾಗಿದ್ಯ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಮಾಡುವುದಾಗಿ ಸುಧಾಕರ್ ತಿಳಿಸಿದ್ರು.