National

ಬಸ್‌ ಓಡಿಸಿ ಚಾಲಕನ ಪ್ರಾಣ ಉಳಿಸಿದ ಮಹಿಳೆ

ಪುಣೆ: ಚಾಲಕ ಮೂರ್ಛೆ ಹೋಗಿದ್ದನ್ನು ಗಮನಿಸಿದ ಬಸ್‌ನಲ್ಲಿದ್ದ ಮಹಿಳೆಯೊಬ್ಬರು, ಬಸ್‌ನ್ನು ತಾನೇ ಓಡಿಸಿ, ಚಾಲಕನ ಪ್ರಾಣ ಉಳಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

   ಮಿನಿ ಬಸ್‌ನಲ್ಲಿ ಮಕ್ಕಳು ಮತ್ತು ಮಹಿಳೆಯರು ಪುಣೆ ಬಳಿ ಇರುವ ಶಿರೂರ್‌ನ ಕೃಷಿ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ನಂತರ ವಾಪಸ್‌ ಬರುವಾಗ ಬಸ್‌ ಚಾಲಕನಿಗೆ ಫಿಟ್ಸ್‌ ಬಂದು ಮೂರ್ಛೆ ಹೋಗಿದ್ದಾನೆ. ಇದನ್ನು ಗಮನಿಸಿದ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಡ್ರೈವರ್‌ ನೆರವಿಗೆ ಬಂದಿದ್ದಾರೆ.

೪೨ ವರ್ಷದ ಯೋಗಿತಾ ಸತವ್‌ ಅವರು ತಾವೇ ಡ್ರೈವರ್‌ ಸೀಟಿನಲ್ಲಿ ಕುಳಿತು ಹತ್ತಕ್ಕೂ ಹೆಚ್ಚು ಕಿಲೋ ಮೀಟರ್‌ ಬಸ್‌ ಚಲಾಯಿಸಿದ್ದಾರೆ. ನೇರವಾಗಿ ಆಸ್ಪತ್ರೆಗೆ ಹೋಗಿ ಚಾಲಕನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಬಸ್‌ನಲ್ಲಿದ್ದ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.

Share Post