ಸಿಮೆಂಟ್ ಪಿಲ್ಲರ್‌ಗೆ ಡಿಕ್ಕಿ ಹೊಡೆದ ರಾಜಧಾನಿ ಎಕ್ಸ್‌ಪ್ರೆಸ್: ತಪ್ಪಿದ ಅನಾಹುತ
ಗುಜರಾತ್: ರೈಲ್ವೆ ಹಳಿ ಮೇಲೆ ಇದ್ದ ದೊಡ್ಡ ಸಿಮೆಂಟ್ ಪಿಲಲ್ರ್‌ಗೆ ರಾಜಧಾನಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿರುವ ಘಟನೆ ಗುಜರಾತ್‌ನ ವಲ್ಸಾಡ್ ಬಳಿ ನಡೆದಿದೆ. ಮುಂಬೈನಿಂದ ಹಜ್ರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ ಈ ದುರ್ಘಟನೆ ನಡೆದಿದೆ. ರೈಲು ಹೊಡೆತಕ್ಕೆ ಪಿಲ್ಲರ್ ಪೀಸ್ ಪೀಸ್ ಆಗಿದೆ. ಆದರೆ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಲೊಕೊ ಪೈಲಟ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆತಂಕಕಾರಿ ವಿಷಯವನ್ನು ಅಲ್ಲಿನ ಸ್ಥಳೀಯ ಪೊಲೀಸರು ಹೊರಹಾಕಿದ್ದಾರೆ. ಯಾರೂ ಆಗಂತುಕ ವ್ಯಕ್ತಿಗಳು ಸಿಮೆಂಟ್ ಪಿಲ್ಲರ್ ಅನ್ನು ರೈಲ್ವೆ ಹಳಿ ಮೇಲೆ ಅಡ್ಡಲಾಗಿ ನಿಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ರೈಲ್ವೆ ಅಧಿಕಾರಿಗಳ ದೂರಿನ ಮೇರೆಗೆ ಕೇಸ್ ನಮೂದು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಷ್ಟು ಬೃಹದಾಕಾರದ ಸಿಮೆಂಟ್ ಪಿಲ್ಲರ್ ಅನ್ನು ಇಲ್ಲಿಗೆ ತಂದವರ್ಯಾರು, ಹರಸಾಹಸ ಪಟ್ಟು ಪಿಲ್ಲರ್ ತಂದಿಟ್ಟಿರುವುದು ಖಾತ್ರಿಯಾಗಿದೆ. ಕಿಡಿಗೇಡಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ದುರ್ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ, ಧನಹಾನಿ ನಡೆದಿಲ್ಲವೆಂದು ರೈಲ್ವೆ ಇಲಾಖೆ ಪ್ರಕಟಿಸಿದೆ.