ಮೇಕೆದಾಟು ಪಾದಯಾತ್ರೆ : ಚಿಕ್ಕಬಳ್ಳಾಪುರದ 10 ಪೊಲೀಸರಿಗೆ ಕೋವಿಡ್
ಚಿಕ್ಕಬಳ್ಳಾಪುರ : ಮೇಕೆದಾಟು ಪಾದಯಾತ್ರೆಗೆ ಭದ್ರತೆ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಂಡಿತ್ತು. ಹಾಗೆ ಬಂದವರಲ್ಲಿ ಈಗ ಕೊರೊನಾ ಕಾಣಿಸಿಕೊಳ್ಳುತ್ತಿದೆ. ನಾಲ್ಕು ದನಗಳ ಕಾಲ ನಡೆಸಿದ ಪಾದಯಾತ್ರೆಯಲ್ಲಿ ಸಾವಿರಾರು ಜನರು ಸೇರಿದ್ದರು. ಬೇರೆ ಬೇರೆ ಹಳ್ಳಿಗಳಿಂದ ಬಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಚಿಕ್ಕಬಳ್ಳಾಪುರದಿಂದ ಪೊಲೀಸ್ ಸಿಬ್ಬಂದಿಯನ್ನು ರಾಮನಗರಕ್ಕೆ ಕಳುಹಿಸಲಾಗಿತ್ತು. ಈಗ ಅವರಲ್ಲಿ 10ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಒಟ್ಟಾರೆ 125 ಪೊಲೀಸರನ್ನು ಈ ಕರ್ತವ್ಯದ ಮೇಲೆ ನಿಯೋಜಿಸಲಾಗಿತ್ತು. ಅವರೆಲ್ಲರೂ ಹಿಂತಿರುಗಿದ ನಂತರ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಆ ಪೈಕಿ 10 ಜನರಿಗೆ ಪಾಸಿಟಿವ್ ಬಂದಿದ್ದು, ಸದ್ಯ ಅವರೆಲ್ಲರೂ ಈಗ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ.
ಮೇಕೆದಾಟು ಕೆಲಸದ ಮೇಲೆ ಹೋಗಿದ್ದ ಕೋಲಾರದ 25 ಪೊಲೀಸರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ವಿವಿಧ ಜಿಲ್ಲೆಗಳಿಗೂ ಕಾಂಗ್ರೆಸ್ ಮೂರನೆ ಅಲೆಯನ್ನು ಹಂಚಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.