ಕೌಟುಂಬಿಕ ಕಲಹ: ತಂದೆ-ಮಗ ಆತ್ಮಹತ್ಯೆಗೆ ಶರಣು
ಮಂಡ್ಯ: ಕಾಲಿಗೆ ಹಗ್ಗ ಕಟ್ಟಿಕೊಂಡು ನೀರಿಗೆ ಬಿದ್ದು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ. ಮೂವತ್ತೆಂಟು ವರ್ಷ ಗಂಗಾಧರ ಗೌಡ ಹಾಗೂ ಏಳು ವರ್ಷದ ಜಸ್ವಿತ್ ಮೃತರು.
ಮೃತ ಗಂಗಾಧರ ಪತ್ನಿ ಅನೈತಿಕ ಸಂಬಂಧ ಹೊಂದಿದ್ದು, ಇದ್ರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗಂಗಾಧರ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ನಿತ್ಯ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಇದ್ರಿಂದ ಬೇಸತ್ತು ಗಂಗಾಧರ್ ಹಾಗೂ ಜಸ್ವಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ಹಾಗೂ ನನ್ನ ಮಗನ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಗಂಗಾಧರ್ ಡೆತ್‌ನೋಟ್ ಆರೋಪಿಸಿದ್ದಾರೆ. ಜೊತೆಗೆ ವ್ಯಕ್ತಿಯೊಬ್ಬರ ಹೆಸರನ್ನೂ ಡೆತ್‌ನೋಟ್‌ನಲ್ಲಿ ನಮೂದಿಸಿದ್ದಾರೆ.