Districts

ನವಜಾತ ಶಿಶು ಬಿಸಾಕಿಹೋದ ತಾಯಿ ; ಗ್ರಾಮಸ್ಥರಿಂದ ರಕ್ಷಣೆ

ಹಾವೇರಿ: ಆಗಿನ್ನೂ ಜನಿಸಿದ್ದ ಮಗುವನ್ನು ತಾಯಿಯೊಬ್ಬಳು, ಗಡಿದ ಬುಡದಲ್ಲಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.  ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಮಾರನಬೀಡ ಗ್ರಾಮದ ಗುಡ್ಡದ ಗಿಡದ ಬುಡದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳೀಯರು ಅಲ್ಲಿಗೆ ಹೋದಾಗ ಆಗತಾನೆ ಜನಿಸಿದ್ದ ಗಂಡು ಮಗು ಪತ್ತೆಯಾಗಿದೆ.

ಮಗುವನ್ನು ರಕ್ಷಿಸಿರುವ ಸ್ಥಳೀಯರು ಸ್ಪಂದನಾ ದತ್ತು ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮಗುವಿಗೆ ಸ್ವಲ್ಪ ಗಾಯಗಳಾಗಿರುವುದರಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Share Post