ಪಂಜಾಬ್ ಸಿಎಂ ಅಭ್ಯರ್ಥಿ ಆಯ್ಕೆ ಜನರ ಕೈಯಲ್ಲಿ : ಕೇಜ್ರಿವಾಲ್ ಹೊಸ ತಂತ್ರ
ಚಂಡೀಗಢ : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಆಮ್ ಆದ್ಮಿ ಪಾರ್ಟಿ ಒಂದು ಹೊಸ ತಂತ್ರವನ್ನು ರೂಪಿಸಿದೆ. ಸಿಎಂ ಅಭ್ಯರ್ಥಿ ಯಾರಾಗಬೇಕೆಂದು ನೀವೆ ಹೇಳಿ ಎಂದು ಜನರನ್ನೇ ಕೇಳಿದೆ ಆಪ್ ಪಕ್ಷ.
ಪಂಜಾಬ್‌ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಕೇಜ್ರಿವಾಲ್ ಉತ್ತರಿಸಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ, ಈ ಬಗ್ಗೆ ಜನರು ತಮ್ಮ ಅಭಿಪ್ರಾಯ ತಿಳಿಸಲಿ. ಜನರನ್ನು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ನಂಬರ್ ಒಂದನ್ನು ಬಿಡುಗಡೆ ಮಾಡಲಿದ್ದೇವೆ, ಆ ನಂಬರ್ ಮೂಲಕ ಜನರನ್ನು ತಮ್ಮ ಸಿಎಂ ಅಭ್ಯರ್ಥಿಯನ್ನು ಆರಿಸಬಹುದು ಎಂದು ಹೇಳಿ ನಂಬರ್ ಒಂದನ್ನು ಬಿಡುಗಡೆ ಮಾಡಿದರು.
ಜನವರಿ 17 ಸಂಜೆ 5 ಗಂಟೆಗೆಯವರೆಗೆ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಕೇಜ್ರಿವಾಲ್ 70748 70748 ನಂಬರ್ ಅನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಜನರನ್ನೇ ಸಿಎಂ ಅಭ್ಯರ್ಥಿ ಯಾರಾಗಬೇಕೆಂದು ಕೇಳುತ್ತಿರುವ ಮೊದಲ ಪಕ್ಷ ನಮ್ಮದೇ ಎಂದೇ ಪ್ರಶಂಸಿಕೊಂಡರು. ಭಗವಂತ್ ಮಾನ್ ಅವರನ್ನು ನಾನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಕೊಂಡು ಅವರ ಅಭಿಪ್ರಾಯ ಕೇಳಿದೆ ಆದರೆ ಅವರು ಬೇಡ ಜನರನ್ನು ಕೇಳುವಂತೆ ಸೂಚಿಸಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಫೆಬ್ರುವರಿ೧೪ ರಂದು ಎಲೆಕ್ಷನ್ ನಡೆಯಲಿದೆ.