Sports

ಬೂಮ್ರಾ ಮಾರಕ ಬೌಲಿಂಗ್‌ – ಭಾರತಕ್ಕೆ ಅಲ್ಪ ಮುನ್ನಡೆ

ಕೇಪ್‌ಟೌನ್‌  : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿ 223 ರನ್‌ ಕಲೆ ಹಾಕಿದ್ದ ಭಾರತಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಮಾಡಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 210 ರನ್‌ ಕಲೆ ಹಾಕಿತು. ಬೂಮ್ರಾ ಮಾರಕ ದಾಳಿಗೆ ಶರಣಾದ ದ.ಆಫ್ರಿಕಾ.

ಮೊದಲ ಇನ್ನಿಂಗ್ಸ್‌ ಇಂದ 13 ರನ್‌ಗಳ ಸಾಧಾರಣ ಮುನ್ನಡೆಯನ್ನು ಪಡೆದುಕೊಂಡಿರುವ ಭಾರತ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್‌ ಕಳೆದುಕೊಂಡು 57 ರನ್‌ಗಳಿಸಿತ್ತು. ಇದರಿಂದ ಭಾರತಕ್ಕೆ ಈಗ 70 ರನ್‌ಗಳ ಮುನ್ನಡೆ ಸಿಕ್ಕಿದೆ.

ಭಾರತದ ಪರ ಜಸ್ಪ್ರೀತ್‌ ಬೂಮ್ರಾ 5 ವಿಕೇಟ್‌ ಪಡೆದರೆ, ಉಮೇಶ್ ಯಾದವ್ ಮತ್ತು ಶಮಿ ತಲಾ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 1 ವಿಕೆಟ್ ತೆಗೆದರು. ಇನ್ನು ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಓಪನರ್ಸ್‌ಗಳಾದ ಮಯಾಂಕ್‌ ಅಗರ್ವಾಲ್‌ ಮತ್ತು ಕೆ ಎಲ್‌ ರಾಹುಲ್‌ ಅವರು ಬಹು ಬೇಗನೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ನಂತರ ಜೊತೆಯಾದ ಪುಜಾರಾ ಮತ್ತು ವಿರಾಟ್‌ ಕೊಹ್ಲಿ ಮೂರನೇ ದಿನದಾಟಕ್ಕೆ ವಿಕೆಟ್‌ ಕಾಯ್ದುಕೊಂಡಿದ್ದಾರೆ.

 

Share Post