Health

ಒಂದೇ ದಿನ 21 ಸಾವಿರ ಮಂದಿಗೆ ಸೋಂಕು; 10 ಮಂದಿ ಬಲಿ..!

ಬೆಂಗಳೂರು: ಪ್ರತಿದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಪಾಸಿಟಿವಿಟಿ ರೇಟ್‌ ರಾಜ್ಯದಲ್ಲಿ ಶೇಕಡಾ 10ಕ್ಕೇರಿದೆ. ಇಂದೂ ಕೂಡಾ ರಾಜ್ಯದಲ್ಲಿ ಬರೋಬ್ಬರಿ 21,390 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

   ಇಂದು ರಾಜ್ಯಾದ್ಯಂತ 1,95,0477 ಮಂದಿ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿದ್ದಾರೆ. ಇದ್ರಲ್ಲಿ 21 ಸಾವಿರ ಮಂದಿಗೆ ಸೋಂಕು ತಗುಲಿದೆ. ಅದ್ರಲ್ಲಿ ಬೆಂಗಳೂರಿಗರದ್ದೇ ಸಿಂಹಪಾಲು. ಬೆಂಗಳೂರಿನಲ್ಲಿ 15,617 ಮಂದಿಗೆ ಸೋಂಕು ತಗುಲಿದೆ. ಮೃತಪಟ್ಟ ಹತ್ತು ಮಂದಿಯಲ್ಲಿ ಬೆಂಗಳೂರಿನವರೇ ಹೆಚ್ಚಿದ್ದಾರೆ.

ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಿದೆಯಾದರೂ, ಬಿಡುಗಡೆಯಾಗುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಇಂದು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದ ಸೋಂಕಿತರ ಪೈಕಿ, 1541 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Share Post