ಕಳ್ಳಭಟ್ಟಿ ಸೇವಿಸಿ 25 ಮಂದಿ ದುರ್ಮರಣ; 60 ಮಂದಿ ಆಸ್ಪತ್ರೆಗೆ ದಾಖಲು!
ಚೆನ್ನೈ; ಕಳ್ಳಭಟ್ಟಿ ಸೇವನೆ ಮಾಡಿ 25 ಮಂದಿ ದಾರುಣವಾಗಿ ಸವಣ್ಣಪ್ಪಿರುವ ಘಟನೆ ನಡೆದಿದೆ.. ಇನ್ನು 60ಕ್ಕೂ ಹೆಚ್ಚು ಮಂದಿ ಅಸ್ವಸ್ತಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.. ತಮಿಳುನಾಡಿನ ಕಳ್ಳಾಕೂರಿಚಿ ಜಿಲ್ಲೆಯಲ್ಲಿ ಇಂತಹದೊಂದು ದುರಂತ ನಡೆದಿದೆ..
ಭಟ್ಟಿ ಸಾರಾಯಿ ಮಾರಾಟಕ್ಕೆ ನಿಷೇಧ ಇದೆ.. ಹೀಗಿದ್ದರೂ ಕೂಡ ಕೆಲವು ಕಡೆ ಅಕ್ರಮವಾಗಿ ಕಳ್ಳಭಟ್ಟಿ ದಂಧೆ ನಡೆಯುತ್ತಿತ್ತು.. ಕಳೆದ ಕೆಲವು ವರ್ಷಗಳ ಹಿಂದೆಯೂ ತಮಿಳುನಾಡು ಹಾಗೂ ಗಡಿ ಭಾಗದಲ್ಲಿ ಹಲವಾರು ಸಾವನ್ನಪ್ಪಿದ್ದರು.. ಇದೀಗ ಮತ್ತೆ ದೊಡ್ಡ ದುರಂತ ನಡೆದಿದೆ..
ಕಳ್ಳಭಟ್ಟಿ ಮಾರಾಟ ಮಾಡಿದ್ದ ಕೆ. ಕನ್ನುಕುಟ್ಟಿ ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಸುಮಾರು 200 ಲೀಟರ್ ಕಳ್ಳಭಟ್ಟಿ ವಶಪಡಿಸಿಕೊಳ್ಳಲಾಗಿದೆ.. ಇದರಲ್ಲಿ ಮೆಥನಲ್ ಜಾಸ್ತಿ ಬಳಸಿರುವುದು ಪತ್ತೇಯಾಗಿದೆ..