ಪೊಂಗಲ್ ದಿನ ನನ್ನನ್ನು ಭೇಟಿ ಆಗಬೇಡಿ – ಸ್ಟಾಲಿನ್
ಚೆನೈ : ಬುಧವಾರ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸ್ಟಾಲಿನ್ ಸಂದೇಶ ಕಳುಹಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು ಯಾವುದೇ ಕಾರಣಕ್ಕೂ ತಪ್ಪವಾರದು ಎಂದು ಸ್ಟಾಲಿನ್ ಹೇಳಿದ್ದಾರೆ.
ಪೊಂಗಲ್ ಹಬ್ಬದ ಸಂದರ್ಭದಲ್ಲಿ ವೈಯಕ್ತಿಕವಾಗಿ ಬಂದು ನನಗೆ ಶುಭ ಕೋರುವುದು ಬೇಡ, ನೀವು ಇದ್ದ ಜಾಗದಿಂದಲೇ ವಿಶ್ ಮಾಡಿ ಸಾಕು ಎಂದು ತಮಿಳುನಾಡಿನ ಮುಖ್ಯಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಬ್ಬದ ಶುಭಾಷಯ ತಿಳಿಸಲು ಬರ್ತಾರೆ, ಇದರಿಂದ ಜನ ಗುಂಪು ಸೇರಲು ಅವಕಾಶ ಮಾಡಿಕೊಟ್ಟಂಗಾಗುತ್ತದೆ. ಇದರಿಂದ ಕೊರೊನಾ ಹರಡುವ ಭಯ ಇದೆ. ಹಾಗಾಗಿ ಬರುವುದು ಬೇಡ ಎಂದು ಸ್ಟಾಲಿನ್ ಅವರು ಹೇಳಿದ್ದಾರೆ.
ಹಬ್ಬದ ಸಮಯದಲ್ಲಿಯೂ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಯಾವುದೇ ರಿಯಾಯ್ತಿ ಇಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ.