BengaluruDistricts

ಮೇಕೆದಾಟು ಪಾದಯಾತ್ರೆ : ಸರ್ಕಾರದ ವಿರುದ್ಧ ಹೈ ಕೋರ್ಟ್‌ ಗರಂ

ಬೆಂಗಳುರು : ಮೇಕೆದಾಟು ಪಾದಯಾತ್ರೆಯ ಸಂಬಂಧ ಹೈಕೋರ್ಟ್‌ಗೆ ಇಂದು ಪಿಐಎಲ್‌ ಸಲ್ಲಿಕೆಯಾಗಿತ್ತು. ತುರ್ತು ವಿಚಾರಣೆ ಮಾಡುವಂತೆಯೂ ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ಮಾಡಿರುವ ಹೈ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಡದಿದ್ದ ಮೇಲೆ ಅದನ್ನು ತಡೆಯಲು ಯಾರಿಗಾಗಿ ಕಾದಿದ್ದೀರಿ ಎಂದು ರಾಜ್ಯ ಸರ್ಕಾರವನ್ನು ಹೈ ಕೋರ್ಟ್‌ ಪ್ರಶ್ನಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಲಯ ತೀವ್ರ ಅಸಮಾಧಾನ ಹೊರಹಾಕಿತು. ಈಗಾಗಲೇ ರಾಜ್ಯದಲ್ಲಿ ಕೋವಿಡ್‌ ತತ್ತರಿಸಿದೆ, ಸಮುದಾಯಕ್ಕೆ ಕೋವಿಡ್‌ ಹಬ್ಬಿದ್ದರೂ ಕೂಡ ನೀವು ರ್ಯಾಲಿ ತಡೆಯಲು ಮುಂದಾಗಿಲ್ಲವಲ್ಲ ಎಂದು ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಹೈಕೋರ್ಟ್‌ ಆದೇಶ ನೀಡುವವರೆಗೂ ನೀವು ಏನೂ ಕ್ರಮ ಜರುಗಿಸುವುದಿಲ್ಲವೇ ? ಕಾಂಗ್ರೆಸ್‌ನವರು ಸಾರ್ವಜನಿಕ ಹಿತಾಸಕ್ತಿಯ ವಿರುದ್ಧ ಇದ್ದಾರೆ ಎಂದು ನ್ಯಾಯಲಯ ಖಾರವಾಗಿ ಪ್ರಶ್ನಿಸಿದೆ.

ಇನ್ನು ಕೆಪಿಸಿಸಿಗೆ ಹೈಕೋರ್ಟ್, ನೀವು ಪಾದಯಾತ್ರೆ ರ್ಯಾಲಿ ಮಾಡಲು ಅನುಮತಿ ಪಡೆದಿದ್ದೀರಾ ಎಂದು  ಪ್ರಶ್ನೆ ಮಾಡಿದೆ.

ಸರ್ಕಾರದ ಪರ ಎಎಜೆ ಕೋರ್ಟ್‌ಗೆ ಹಾಜರಾಗಿ, ಈಗಾಗಲೇ ಪಾದಯಾತ್ರೆ ಕೈಗೊಂಡವರ ಮೇಲೆ ಮೂರು ಎಫ್‌ಐಆರ್‌ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಯಾವ ಕ್ರಮ ಅನುಸರಿಸುತ್ತಿದ್ದೀರಿ ? ಪಾದಯಾತ್ರೆಗೆ ಅನುಮತಿ ಹೇಗೆ ಕೊಟ್ಟಿರಿ ಎಂಬುದಕ್ಕೆ ಹೈ ಕೋರ್ಟ್‌ ಉತ್ತರ ಕೇಳಿದೆ. ಇದಕ್ಕಾಗಿ ಒಂದು ದಿನ ಕಾಲಾವಕಾಶ ನೀಡಿದೆ. ಕೋರ್ಟ್‌ ವಿಚಾರಣೆಯನ್ನು ಅನ್ನು ಜನವರಿ ೧೪ಕ್ಕೆ ಮುಂದೂಡಲಾಗಿದೆ.

Share Post