National

ಅಸಭ್ಯ ಕಮೆಂಟ್‌; ಸೈನಾ ಕ್ಷಮೆ ಕೇಳಿದ ನಟ ಸಿದ್ಧಾರ್ಥ್‌

ಮುಂಬೈ: ಕೊನೆಗೂ ನಟ ಸಿದ್ಧಾರ್ಥ್‌ ಅವರು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಪತ್ರವೊಂದಕ್ಕೆ ಹಾಕಿರುವ ಸಿದ್ಧಾರ್ಥ್‌, ಪ್ರೀತಿಯ ಸೈನಾ ಅವರೇ, ಪ್ರಧಾನಿ ಭದ್ರತೆ ವಿಚಾರಕ್ಕೆ ಸಂಬಂಧಿಸಿದ ನಿಮ್ಮ ಟ್ವೀಟ್‌ಗೆ ನಾನು ಪ್ರತಿಕ್ರಿಯೆ ನೀಡಿದ್ದೆ. ಅದರಲ್ಲಿ ಬಳಸಿದ ಪದದಿಂದಾಗಿ ಟೀಕೆ ವ್ಯಕ್ತವಾಗಿದೆ. ಹೀಗಾಗಿ ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನಾನು ಹಲವು ವಿಷಯಗಳಲ್ಲಿ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಅದೇ ರೀತಿ ನಿಮ್ಮ ಟ್ವೀಟ್‌ ಬಗ್ಗೆಯೂ ಭಿನ್ನಾಭಿಪ್ರಾಯ ಇದೆ. ಹೀಗಾಗಿ ನಿಮ್ಮ ಟ್ವೀಟ್‌ ಓಡಿದಾದ ನನಗೆ ಕೋಪ ಬಂದಿತ್ತು ಎಂದು ಸಿದ್ಧಾರ್ಥ್‌ ತಮ್ಮ ಟ್ವೀಟ್‌ ನಲ್ಲಿ ಹೇಳಿಕೊಂಡಿದ್ದಾರೆ.

   ಪಂಜಾಬ್‌ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಆದ ಭದ್ರತಾ ಲೋಪದ ಬಗ್ಗೆ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ಸೆಹ್ವಾಲ್‌ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದರು. ಇದನ್ನು ಟೀಕಿಸಿದ್ದ ನಟ ಸಿದ್ಧಾರ್ಥ್‌, ಅವಹೇಳನಕಾರಿ ಪದ ಬಳಕೆ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ನಟ ಸಿದ್ಧಾರ್ಥ್‌ ಕೊನೆಗೂ ಕ್ಷಮೆಯಾಚಿಸಿದ್ದಾರೆ.

 ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ವೇಳೆ ಭದ್ರತಾಲೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್‌ ಟ್ವೀಟ್‌ ಮಾಡಿ, ಸ್ವಂತ ಪ್ರಧಾನಿಗೇ ಭದ್ರತಾಲೋಪವಾದರೆ, ಯಾವುದೇ ದೇಶ ತಾನು ಸುರಕ್ಷಿತ ಎಂದು ಹೇಳಿಕೊಳ್ಳಲಾಗದು ಎಂದು ಸೈನಾ ಟ್ವೀಟ್‌ ಮಾಡಿದ್ದರು. ಇದಕ್ಕೆ ಸಿದ್ಧಾರ್ಥ್‌ ವ್ಯಂಗ್ಯವಾಗಿ ಟ್ವೀಟ್‌ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದರು.

Share Post