Bengaluru

ಕಾಂಗ್ರೆಸ್‌ ನಾಯಕರು ಮಂಡಿಯೂರಿ ಕ್ಷಮೆ ಕೇಳಬೇಕಿತ್ತು: ಆರಗ ಜ್ಞಾನೇಂದ್ರ

ಬೆಂಗಳೂರು: ನಿನ್ನೆಯಿಂದ ನಡೆತುತ್ತಿರುವ ಕಾಂಗ್ರೆಸ್‌ ನಾಯಕರ ಮೇಕೆದಾಟು ಪಾದಯಾತ್ರೆ ವಿರುದ್ದ ಗೃಹ ಸಚಿವ ಆರಗ್‌ ಜ್ಞಾನೇಂದ್ರ ಕಿಡಿ ಕಾರಿದ್ದಾರೆ. ಈಮದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರುವುದಕ್ಕೂ ಮುನ್ನ ಕಾಂಗ್ರೆಸ್‌ ಅಧಿಕಾರದಲ್ಲಿತ್ತು ಆಗ ಏನು ಮಾಡಿದ್ರು ಅವರು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡುವ ಬದಲಿಗೆ ಅವರು, ʻನದಿ ದಡದಲ್ಲಿ ಮಂಡಿಯೂರಿ ಕೂತು. ಕಿವಿ ಹಿಡಿದು ಕುಳಿತು ಕ್ಷಮೆ ಕೇಳಬೇಕಿತ್ತುʼ. ಅಯ್ಯಾ..ನಾಡಿನ ಜನರೇ.. ನಾವು ಆಡಳಿತ  ಪಕ್ಷದಲ್ಲಿದ್ದಾಗ ನಮಗೆ ಈ ಯೋಜನೆ ಅನುಷ್ಟಾನಕ್ಕೆ ತರಬೇಕು ಎಂಬುದು ನೆನಪಿಗೆ ಬರ್ಲಿಲ್ಲ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಆವಾಗ ಇಲ್ಲದ ಜನಪರ ಕಾಳಜಿ ಇದ್ದಕ್ಕಿದ್ದಂತೆ ಬಂದಿದ್ಯಾ ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಕೊರೊನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡೋದು ಸರೀನಾ..? ಈಗಾಗಲೇ ೩೦ ಜನರ ವಿರುದ್ಧ ಕೇಸ್‌ ದಾಖಲಾಗಿದೆ. ನಾವು ಅಸಹಾಯಕರಲ್ಲ, ಕಾನೂನು ಕ್ರಮ ಜರುಗಿಸುತ್ತೇವೆ. ಪಾದಯಾತ್ರೆ ತಡೆಯುವುದು ವಿಚಾರವೇ ಅಲ್ಲ, ಪೊಲೀಸ್‌ ಪೋರ್ಸ್‌ ಬಳಸಿ ಪಾದಯಾತ್ರೆಯನ್ನು ಹತ್ತಿಕ್ಕಬಹುದು.  ಆದ್ರೆ ಅವರು ಜನನಾಕರಾಗಿದ್ದು ಅರ್ಥ ಮಾಡಿಕೊಳ್ತಾರೆ ಅಂದ್ಕೊಂಡ್ವಿ ಆದರೆ ಅದು ಅವರಿಗೆ ಅರ್ಥ ಆಗಿಲ್ಲ. ಮುಂದೆ ಆಗುವ ಆನಾಹುತಕ್ಕೆ ಅವರೇ ಕಾರಣ ಆಗ್ತಾರೆ. ರಾಜ್ಯದಲ್ಲಿ ಲಾಕ್‌ಡೌನ್‌ ಮಾಡಿದ್ರೆ ಅದರ ನೇರ ಹೊಣೆ ಕಾಂಗ್ರೆಸ್‌ ನಾಯಕರದ್ದೇ ಎಂದು ಆರಗ ಜ್ಞಾನೇಂದ್ರ ದೂಷಿಸಿದ್ರು.  ಡಿಕೆಶಿ ಮಾಸ್ಕ್‌ ಇಲ್ಲದೆ ನಡೆಯುತ್ತಿದ್ದಾರೆ. ಅವರ ಆರೋಗ್ಯದ ಸಲುವಾಗಿ ಕೊರೊನಾ ಪರೀಕ್ಷೆ ಮಾಡಲು ಹೋದ್ರೆ ಅಧಿಕಾರಿಗಳನ್ನು ಬೈದು ಕಳಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಜ್ವರ ಬಂದಿದ್ದು, ಈಗ ಎಲ್ಲರಲ್ಲೂ ಆತಂಕ ವ್ಯಕ್ತವಾಗಿದೆ. ಅವರ ಬೇಜಾವಾಬ್ದಾರಿಯುತ ನಡವಳಿಕೆಯಿಂದ ಜನರ ಕ್ಷಮೆಯಾಚಿಸಬೇಕೆಂದು  ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

 

Share Post