ಗಣಿಗಾರಿಕೆಯಿಂದ ಭೂಕಂಪ ಆಗಿದ್ರೆ ಗಣಿಗಾರಿಕೆ ನಿಲ್ಲಿಸಲು ರೆಡಿ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನವಾಗುತ್ತಿತ್ತು. ಇದ್ದರಿಂದ ವಿರೋಧ ಪಕ್ಷದವರು ಗಣಿಗಾರಿಕೆಯಿಂದಲೇ ಭೂಕಂಪನವಾಗುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಸುಧಾಕರ್, ಗಣಿಗಾರಿಕೆಯಿಂದ ಭೂಕಂಪ ಆಗಿದ್ರೆ ಗಣಿಗಾರಿಕೆ ನಿಲ್ಲಿಸಲು ನಾನು ರೆಡಿಯಾಗಿದ್ದೇನೆ. ನನ್ನ ಜನರಿಗೋಸ್ಕರ ನಾನು ಕ್ಲಿಯರ್ ಆಗಿದ್ದೇನೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದೇ ಒಂದು ಕ್ರಷರ್ ನಡೆಸಲು ನಾನು ಬಿಡೋದಿಲ್ಲ. ಅದ್ರಿಂದ ಆಗಿದ್ಯಾ ಇಲ್ವಾ ಎಂಬುದನ್ನ ನೀವು ಹೇಳಿ ಎಂದರು.
ಇನ್ನು ವಿರೋಧ ಪಕ್ಷದವರು ಕೆಲವರು ಗಣಿಗಾರಿಕೆ ಯಿಂದಲೇ ಭೂಕಂಪನ ಆಗುತ್ತಿದೆ ಅಂತ ಅಪಪ್ರಚಾರ ಮಾಡಿದ್ದಾರೆ. ಹೀಗಾಗಿ ಜನರ ಮುಂದೆ ವಿಜ್ಞಾನಿಗಳ ಬಳಿ ಸುಧಾಕರ್ ಮಾಹಿತಿ ಪಡೆದುಕೊಂಡರು.
ಗಣಿಗಾರಿಕೆ ವೇಳೆ ಅತಿಯಾದ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಗಣಿಗಾರಿಕೆಯಲ್ಲಿ ಅತಿಯಾದ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಕಡ್ಡಾಯವಾಗಿ ಕಂಟ್ರೋಲ್ ಬ್ಲಾಸ್ಟಿಂಗ್ ಮಾತ್ರ ಮಾಡಬೇಕು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುಧಾಕರ್ ತಾಕೀತು ಮಾಡಿದರು.
ಇನ್ನು ಶಾಲೆಯ ಕಟ್ಟಡವೇ ಬಿರುಕು ಬಿಟ್ಟ ವಿಚಾರವಾಗಿ ಮಾತನಾಡಿ ಅವರು, ಡೀಪ್ ಬ್ಲಾಸ್ಟಿಂಗ್ ಮಾಡಿರುವುದರಿಂದ ನಮ್ಮ ಶಾಲಾ ಕಟ್ಟಡವೂ ಬಿರುಕು ಬಂದಿದೆ. ಹೊಸ ಕಟ್ಟಡದಲ್ಲೇ ಬಿರುಕು ಬಿಟ್ಟಿದೆ.
ಡೀಪ್ ಬ್ಲಾಸ್ಟಿಂಗ್ ಮಾಡ್ತಿರೋದು ಸತ್ಯ.ಹೀಗಾಗಿ ಯಾರೇ ಮಾಡಿದ್ರೂ ಕಾನೂನು ಕ್ರಮ ತಗೊಳ್ಳಿ ಎಂದು ತಾಕೀತು ಮಾಡಿದರು.