Cinema

ಸಖತ್‌ ನಟಿ ನಿಶ್ವಿಕಾ ನಾಯ್ಡುಗೆ ಕೋವಿಡ್‌ ಪಾಸಿಟೀವ್‌

ಬೆಂಗಳೂರು : ಸಿನಿಮಾ ಕ್ಷೇತ್ರದ ಬಹುತೇಕರು ಕೊರೊನಾಗೆ ತುತ್ತಾಗುತ್ತಿದ್ದಾರೆ. ರಾಷ್ಟ್ರದೆಲ್ಲೆಡೆ ಮೂರನೇ ಅಲೆ ಹೆಚ್ಚುತ್ತಿರುವ ಕಾರಣಕ್ಕೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಸಖತ್‌ ನಟಿ ನಿಶ್ವಿಕಾ ಕೂಡ ಕೊರೊನಾ ಪಾಸಿಟಿವ್‌ ಆಗಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿರುವ ನಿಶ್ವಿಕಾ ಕೋವಿಡ್‌ನ ಸೌಮ್ಯ ಗುಣಲಕ್ಷಣಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ತಮ್ಮ ಡಾಕ್ಟರ್‌ ನಿರ್ದೇಶನದಂತೆ ಐಸೋಲೇಟ್‌ ಆಗಿದ್ದು ಎಲ್ಲರಿಗೂ ಸುರಕ್ಷಿತವಾಗಿರುವಂತೆ ಮನವಿ ಮಾಡಿಕೊಂಡಿದ್ದಾರೆ.

ಜಂಟಲ್‌ಮೆನ್‌, ಅಮ್ಮಾ ಐ ಲವ್‌ ಯೂ , ಸಖತ್‌ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿಶ್ವಿಕಾ ಅಭಿನಯಿಸಿದ್ದಾರೆ.

Share Post