ಹಳೆ ಮಾದರಿಯಲ್ಲೇ ನಡೆಯಲಿದೆ SSLC, PUC ಪರೀಕ್ಷೆ – ಬಿ ಸಿ ನಾಗೇಶ್
ಬೆಂಗಳೂರು : ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಆದರೆ ಈ ಬಾರಿ ಮೊದಲು ನಡೆಯುತ್ತಿದ್ದ ರೀತಿಯೇ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ನಿಗದಿ ಪಡಿಸಿರುವ ಸಮಯಕ್ಕೇ SSLC, PUC ಪರೀಕ್ಷೆ ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಒಂದು ವೇಳೆ ಕೋವಿಡ್ನ ಮೂರನೇ ಅಲೆಯ ಕಾರಣ ಕೇಸ್ಗಳು ಹೆಚ್ಚಾದರೆ ಮಾತ್ರ ಪರೀಕ್ಷೆ ಮುಂದೂಡೂವ ಬಗ್ಗೆ ಸರ್ಕಾರ ಆಲೋಚಿಸುತ್ತದೆ ಎಂದು ತಿಳಿಸಿದ್ದಾರೆ.
ಕೋವಿಡ್ ಹೆಚ್ಚಳದ ಕಾರಣ ಈಗ ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಒಂದು ವೇಳೆ ಸೋಂಕು ಇಳಿಮುಖ ಕಾಣದೆ ಹೋದರೆ ನಾವು ರಜೆಯನ್ನು ವಿಸ್ತರಿಸುತ್ತೇವೆ. ಇನ್ನು ಇತರ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಜಿಲ್ಲಾ ಮಂತ್ರಿ ಜೊತೆ ಮಾತನಾಡಿ ರಜೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಬಿ ಸಿ ನಾಗೇಶ್ ತಿಳಿಸಿದ್ದಾರೆ.
ಬಿ ಸಿ ನಾಗೇಶ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ೮ ದಿನಗಳ ಐಸೋಲೇಷನ್ನಲ್ಲಿದ್ದರು. ಈಗ ಚೇತರಿಸಿಕೊಂಡು ಶಿಕ್ಷಣ ಇಲಾಖೆಯ ಕೆಲಸಗಳನ್ನು ಮತ್ತೆ ಪ್ರಾರಂಭಿಸಿದ್ದಾರೆ.