ಆರೋಗ್ಯ ಸಚಿವ ಸುಧಾಕರ್ ಭ್ರಷ್ಟಾಚಾರದ ಕೂಪ; ಡಿ.ಕೆ. ಶಿವಕುಮಾರ್
ಬೆಂಗಳೂರು; ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಭ್ರಷ್ಟಾಚಾರದ ಕೂಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಧಾಕರ್ ಅವರ ಪ್ರತಿಯೊಂದು ಹಗರಣವನ್ನೂ ನಾವು ಬಿಚ್ಚಿಟ್ಟಿದ್ದೇವೆ. ಪ್ರತಿಯೊಂದು ಆಸ್ಪತ್ರೆ ಬೆಡ್ನಲ್ಲೂ ಹಗರಣ ಆಗಿದೆ ಎಂದು ಆರೋಪಿಸಿದರು.
ಸುಧಾಕರ್ ಅವರು ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಸುಧಾಕರ್‌ಗೆ ತಿರುಗೇಟು ನೀಡಿದರು.