ಜಮ್ಮು-ಕಾಶ್ಮೀರದಲ್ಲಿ ಮಳೆ ಹಾಗೂ ಹಿಮಪಾತ; ಕುಸಿಯುತ್ತಿವೆ ಗುಡ್ಡಗಳು..!
ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಇದರ ನಡುವೆ ಗುಡ್ಡ ಕುಸಿತಗಳೂ ಹೆಚ್ಚಾಗುತ್ತಿವೆ. ಹಿಮ ಅಡಿಗಟ್ಟಲೆ ಶೇಖರಣೆಯಾಗುತ್ತಿರುವುದರಿಂದ ಮಣ್ಣು ಸಡಿಲವಾಗುತ್ತಿದೆ. ಹೀಗಾಗಿ ಗುಡ್ಡ ಕುಸಿತಗಳು ಹೆಚ್ಚಾಗುತ್ತಿವೆ. ಮಣ್ಣು, ದೊಡ್ಡ ದೊಡ್ಡ ಕಲ್ಲುಗಳು ರಸ್ತೆಗಳಿಗೆ ಉರುಳಿಬೀಳುತ್ತಿವೆ. ಇದ್ರಿಂದಾಗಿ ಅಪಘಾತಗಳು, ರಸ್ತೆ ಸಂಚಾರಕ್ಕೆ ಅಡಚಣೆಗಳಾಗುತ್ತಿವೆ.
ತೀವ್ರ ಮಳೆ ಕೂಡಾ ಆಗುತ್ತಿದೆ. ಜೊತೆಗೆ ಗರಿಷ್ಠ ನಾಲ್ಕು ಅಡಿಯಷ್ಟು ಹಿಮ ರಸ್ತೆಗಳಲ್ಲಿ ಶೇಖರಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕಯ ದಿನಗಳಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಬನಿಹಾಲ್ ನಲ್ಲಿ ಭೂಕುಸಿತ ಮತ್ತು ಹಿಮಪಾತದಿಂದಾಗಿ ಹೆದ್ದಾರಿ ಅಸ್ತವ್ಯಸ್ತಗೊಂಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ವಾಹನಗಳು ಅಲ್ಲಿಲ್ಲಿ ಸಿಲುಕಿಕೊಂಡಿವೆ.