ಅಯೋಧ್ಯೆಯಲ್ಲಿ ಭೂಕಂಪನ: 4.3 ತೀವ್ರತೆ ದಾಖಲು
ಉತ್ತರಪ್ರದೇಶ: ಗುರುವಾರ ನಡುರಾತ್ರಿ ಸರಿಸುಮಾರು 11ಗಂಟೆ 59 ನಿಮಿಷ 22ಸೆಕೆಂಡ್ಗೆ ಭೂಮಿ ಕಂಪಿಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ರಿಕ್ಟರ್ ಮಾಪಕದಲ್ಲಿ ೪.೩ರಷ್ಟು ತೀವ್ತೆ ದಾಖಲಾಗಿದ್ದು ಜನ ಕಂಗಾಲಾಗಿದ್ದಾರೆ. ಭೂಕಂಪ ಉಂಟಾದ ಸ್ಥಳ ಅಯೋಧ್ಯೆಯಿಂದ ಸರಿಸುಮಾರು 176ಕಿ.ಮೀ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ ಸುಮಾರು 300 ಕಿಮೀ ಪಶ್ಚಿಮ ವಾಯವ್ಯ ಭಾಗದಲ್ಲಿದೆ. ಸದಾ ಒಂದಿಲ್ಲೊಂದು ಭೂಕಂಪದ ಅನುಭವ ನಡೆಯುತ್ತಲೇ ಇರುತ್ತದೆ ಹಾಗಾಗಿ ನೇಪಾಳವನ್ನು ಭೂಕಂಪ ಪೀಡಿತ ಪ್ರದೇಶ ಎಂದು ಕೂಡ ಕರೆಯಲಾಗುತ್ತದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಮಧ್ಯರಾತ್ರಿ ೧೨ಗಂಟೆ ಆಗುವುದಕ್ಕೂ ಒಂದು ನಿಮಿಷ ಮುಂಚಿತವಾಗಿ ಭೂಕಂಪ ನಡೆದಿದೆ. ಭೂಮಿ ಕಂಪಿಸುತ್ತಿದ್ದಂತೆ ಜನ ಭಯಬೀತರಾಗಿ ಮನೆಗಳಿಂದ ಆಚೆ ಬಂದು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು. ಸುಮಾರು ಒಂದು ಒಂದೂವರೆ ತಾಸಾದರೂ ಮನೆಗಳಿಗೆ ಹಿಂದಿರುಗದೆ ರಸ್ತೆಯಲ್ಲೇ ಉಳಿದರು. ಪುಟ್ಟ ಮಕ್ಕಳು, ವೃದ್ಧರು ಮಹಿಳೆಯರು ಸೇರಿದಂತೆ ಎಲ್ಲರಲ್ಲೂ ಭಯದ ವಾತಾವರಣ ಮನೆಮಾಡಿತ್ತು.
Earthquake of Magnitude:4.3, Occurred on 06-01-2022, 23:59:22 IST, Lat: 28.14 & Long: 83.14, Depth: 15 Km ,Location: 176km NNE of Ayodhya, Uttar Pradesh, India for more information download the BhooKamp App https://t.co/Puap6pFcB3 @ndmaindia @Indiametdept pic.twitter.com/56BwhxxEDo
— National Center for Seismology (@NCS_Earthquake) January 6, 2022