Sports

ಭಾರತಕ್ಕೆ ಹೀನಾಯ ಸೋಲು – ಸರಣಿ ಸಮಬಲ

ವಾಂಡರರ್ಸ್‌ : ನಾಲ್ಕನೇ ದಿನವೇ ಪಂದ್ಯ .ಆಫ್ರಿಕಾದ ಪಾಲಾಗಿದೆ. ಮಳೆಯ ಕಾರಣ ನಾಲ್ಕನೇ ದಿನದಾಟ ತಡವಾಗಿ ಶುರುವಾಯಿತು. ನಾಲ್ಕನೇ ದಿನಕ್ಕೆ ಕೇವಲ ೩೪ ಓವರ್ಸೀಮಿತ ಪಡಿಸಲಲಾಯಿತು.  240 ರನ್ಗಳ ಗುರಿಯನ್ನು ಬೆನ್ನಟ್ಟಿದ ದ.ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿತ್ತು.

ಎಲ್ಗರ್‌ ಅವರ ಅಮೋಘವಾದ 96 ರನ್‌ಗಳ ಸಹಾಯದಿಂದ ದ.ಆಫ್ರಿಕಾ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ೭ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು ಸಮಬಲ ಮಾಡಿಕೊಂಡಿದೆ.

ಪಂದ್ಯದ ನಂತರ ಮಾತನಾಡಿದ ನಾಯಕ ಕೆ.ಎಲ್‌ ರಾಹುಲ್‌ ರನ್‌ ಗಳಿಸುವುದು ಅಷ್ಟೇನು ಸುಲಭ ಇರಲಿಲ್ಲ. ಪಿಚ್‌ ಸ್ವಲ್ಪ ಅಪ್‌ ಅಂಡ್‌ ಡೌನ್‌ ಇತ್ತು. ಆದರೆ ದ.ಆಫ್ರಿಕಾದವರು ನಿಧಾನವಾಗಿ ಆಡಿ ಪಂದ್ಯ ಗೆದ್ದಿದ್ದರೆ. ಅವರು ಈ ಪಂದ್ಯ ಗೆಲ್ಲಲು ಅರ್ಹರು ಎಂದು ಹೇಳಿದ್ದಾರೆ

ಭಾರತದ ಪರ ಅಶ್ವಿನ್‌, ಶಮಿ ಮತ್ತು ಶಾರ್ದುಲ್‌ ಠಾಕೂರ್‌ ತಲಾ ಒಂದು ವಿಕೆಟ್‌ ಪಡೆದರು. ಇನ್ನು ನಿರ್ಣಾಯಕ ಮೂರನೇ ಟೆಸ್ಟ್‌ನಲ್ಲಿ ಭಾರತದ ವಿರಾಟ್‌ ಕೊಹ್ಲಿ ಆಡುವ ನಿರೀಕ್ಷೆ ಇದೆ. ಜ. ೧೧ ರಿಂದ ಮೂರನೇ ಟೆಸ್ಟ್‌ ಆರಂಭವಾಗಲಿದೆ.

Share Post