History

ಇಟಲಿಯಿಂದ ಬಂದಿದ್ದ 125 ಮಂದಿಗೆ ಸೋಂಕು; ಅಮೃತಸರ್‌ ವಿಮಾನ ನಿಲ್ದಾಣದಲ್ಲಿ ಗೊಂದಲ

ಅಮೃತಸರ: ಇಟಲಿಯಿಂದ ಅಮೃತಸರಕ್ಕೆ ವಿಮಾನದಲ್ಲಿ ಬಂದಿಳಿದಿದ್ದ 179 ಪ್ರಯಾಣಿಕರಲ್ಲಿ 125 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ ಏರ್‌ ಇಂಡಿಯಾ ವಿಮಾನ ಇಟಲಿಯಿಂದ ಅಮೃತಸರಕ್ಕೆ ಆಗಮಿಸಿತ್ತು. ನಿಯಮದಂತೆ ಎಲ್ಲರನ್ನೂ ವಿಮಾನ ನಿಲ್ದಾಣದಲ್ಲೇ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಸುಮಾರು 129 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಶುರುವಾಗಿತ್ತು. ಇನ್ನೊಂದೆಡೆ ಇಷ್ಟು ಜನರನ್ನು ಎಲ್ಲಿ ತೆಗೆದುಕೊಂಡು ಹೋಗಬೇಕು. ಎಲ್ಲಿಡಬೇಕು ಎಂಬುದರ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಗೊಂದಲ ಸೃಷ್ಟಿಯಾಗಿತ್ತು. ತದನಂತರ ಎಲ್ಲರನ್ನೂ ಅಂಬುಲೆನ್ಸ್‌ ಮೂಲಕ ಶಿಫ್ಟ್‌ ಮಾಡಲಾಯಿತು. ಈಗ ಎಲ್ಲರನ್ನೂ ಕ್ವಾರಂಟೀನ್‌ ನಲ್ಲಿ ಇರಿಸಲಾಗಿದೆ.

ಎಲ್ಲರಿಗೂ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌ಗೆ ಕಳುಹಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಯಾಕೆಂದರೆ, ಬಹುತೇಕ ದೇಶದಲ್ಲಿ ಈಗ ಒಮಿಕ್ರಾನ್‌ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವ್‌ ಬಂದಿರುವವರಿಗೆ ಒಮಿಕ್ರಾನ್‌ ಸೋಂಕು ತಗುಲಿರುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಪರೀಕ್ಷೆಗೊಳಪಡಿಸಲು ತೀರ್ಮಾನಿಸಲಾಗಿದೆ.

 

Share Post