International

ಅಗ್ನಿ ದುರಂತದಲ್ಲಿ ಏಳು ಮಕ್ಕಳು ಸೇರಿ 13ಮಂದಿ ಸಜೀವ ದಹನ

ನ್ಯಾಯಾರ್ಕ್:‌ ಅಮೆರಿಕಾದ ಫಿಡೆಲ್ಫಿಯಾ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತವಾಗಿ ಏಳು ಮಂದಿ ಮಕ್ಕಳು ಸೇರಿದಂತೆ ಹದಿಮೂರು ಮಂದಿ ಸಜೀವ ದಹನವಾಗಿರುವ ದಾರುಣ ಘಟನೆ ನಡದಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡ ಬೆಂಕಿ ನಿಂದಿಸಿದ್ದಾರೆ. 2ಅಪಾರ್ಟ್‌ಮೆಂಟ್‌ಗಳಲ್ಲಿ ದ್ದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನ ನಾಲ್ಕು ಮೂಲೆಗಳಲ್ಲಿ ಸ್ಮೋಕ್‌ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಆದ್ರೆ ಅವು ಕೆಲಸ ಮಾಡದ ಕಾರಣ ಬೆಂಕಿ ಹೊತ್ತಿಕೊಂಡಿರುವುದು ತಿಳಿಯಲಿಲ್ಲ ಅಂತಾರೆ ಅಗ್ನಿಶಾಮಕ ಸಿಬ್ಬಂದಿ.

ಎರಡೂ ಮಹಡಿಯಲ್ಲಿ ೨೬ ಮಂದಿ ವಾಸಿಸುತ್ತಿದ್ದು ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇದೆ, ಇದು ನನ್ನ ವೃತ್ತಿ ಜೀವನಲ್ಲಿ ನಾನು ನೋಡಿದ ಭಯಾನಕ ಸನ್ನಿವೇಶ  ಎಂದು ಫಿಲಿಡೆಲ್ಪಿಯಾ ಮೇಯರ್‌  ಜಿಮ್‌ ಕೆನ್ನಿ ಬಿಂಬಿಸಿದ್ದಾರೆ. ದುರ್ಘಟನೆಯಲ್ಲಿ ಎಂಟು ಮಂದಿ ಮುಖ್ಯ ದ್ವಾರಗಳಿಂದ ಪಾರಾಗಿದ್ದಾರೆ. ಅಗ್ನಿ ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Share Post