Health

ಲಸಿಕೆ ಹಾಗೂ ಮಾಸ್ಕ್‌ನಿಂದ ಮಾತ್ರ ಕೊರೊನಾ ತಡೆ ಸಾಧ್ಯ; ಏಮ್ಸ್‌ ವೈದ್ಯ ಶರತ್‌ ಚಂದ್ರ

ನವದೆಹಲಿ: ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದರಿಂದ ಮಾತ್ರ ಕೊರೊನಾ ತಡೆಯಲು ಸಾಧ್ಯ. ಹೀಗಾಗಿ ಎಲ್ಲರೂ ಇದನ್ನು ಪಾಲನೆ ಮಾಡಬೇಕು. ಒಂದು ವೇಳೆ ನಮ್ಮ ಜನಸಂಖ್ಯೆಯಲ್ಲಿ ಶೇಕಡಾ 1ರಷ್ಟು ಮಂದಿಗೆ ಕೊರೊನಾ ಬಂದರೂ, ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ ಎಂದು ಏಮ್ಸ್‌ ನ್ಯೂರೊ ಸರ್ಜರಿ ಪ್ರೊಫೆಸರ್‌ ಡಾ.ಪಿ.ಶರತ್‌ ಚಂದ್ರ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ಕೊರೊನಾ ಹೆಚ್ಚು ಹರಡದಂತೆ ತಡೆಯಬಹುದು ಎಂದು ಹೇಳಿದರು. ಇನ್ನು ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರನ್ನು ಸಾಕಷ್ಟು ರೀತಿಯಲ್ಲಿ ಪ್ರೊಟೆಕ್ಟ್‌ ಮಾಡುತ್ತಿದ್ದೇನೆ. ಆದರೆ, ಎಲ್ಲಾ ಮುಂಜಾಗ್ರತೆಗಳನ್ನು ಕೈಗೊಂಡಿದ್ದೇವೆ. ಆದರೂ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡುತ್ತಿದೆ. ಏಮ್ಸ್‌ ನಮ್ಮ ವಿಭಾಗದಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿಗೆ ಸೋಂಕು ತಗುಲಿದೆ. ಅವರಿಗೆ ಸಾಧಾರಣ ಲಕ್ಷಣಗಳಿದ್ದರೂ, ಅವರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಡಾ.ಶರತ್‌ ಚಂದ್ರ ಹೇಳಿದ್ದಾರೆ.

 

 

 

Share Post