International

ಹಿಮ ಮತ್ತು ಮಳೆಗೆ ತತ್ತರಿಸಿದ ಅಫ್ಘಾನಿಸ್ತಾನದ ಜನತೆ

ಕಾಬೂಲ್‌:  ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ಮತ್ತು ರೂಪಾಂತರಿ ವೈರಸ್‌ಗಳಿಂದ ತಲ್ಲಣಗೊಂಡಿದೆ. ಇದರ ಜೊತೆಗೆ ಅಫ್ಘಾನಿಸ್ತಾನ ಜನೆತೆಗ ಮತ್ತೊಂದು ಕಂಟಕ ಎದುರಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಭಾರೀ ಹಿಮಪಾತದಿಂದ ದೇಶದ 32ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿಯನ್ನು ಅಲ್ಲಿನ ತಾಲಿಬಾನ್ ಸರ್ಕಾರ ಘೋಷಣೆ ಮಾಡಿದೆ. ಪ್ರತಿಕೂಲ ಹವಾಮಾನ ಎದುರಿಸಲು ಪ್ರತಿಯೊಂದು ಪ್ರಾಂತದ ಅಧಿಕಾರಿಗಳು ಸಜ್ಜಾಗುವಂತೆ ಸೂಚನೆ ನೀಡಲಾಗಿದೆ.

ಅತಿಯಾದ ಮಳೆಯಿಂದಾಗಿ ಕೆಲವು ಪ್ರಾಂತಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹವಾಮಾನ ವೈಪರೀತ್ಯದ ಬಗ್ಗೆ ʻಫ್ರೀ ಆಫ್‌ ಅಫ್ಘಾನಿಸ್ಥಾನʼ ರೇಡಿಯೋದಲ್ಲಿ ವಿಪತ್ತು ನಿರ್ವಹಣೆ ಸಚಿವಾಲಯದ ಅಧಿಕಾರಿ ಮಾತನಾಡಿ ಪ್ರಜೆಗಳು ಎದೆಗುಂದದೆ ಧೈರ್ವಾಗಿರುವಂತೆ ಪ್ರೇರೇಪಣೆ ಮಾತುಗಳನ್ನಾಡಿದ್ದಾರೆ. ನಿಮಗೆಲ್ಲಾ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುತ್ತೇವೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಭಾರೀ ಹಿಮಪಾತ ವರ್ಷಧಾರೆಯಿಂದ ರಸ್ತೆಗಳು ಕಾಣದಂತಾಗಿವೆ. ರಸ್ತೆಯಲ್ಲಿರುವ ಹಿಮ ತೆರವುಗೊಳಿಸಲು ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಇದಕ್ಕಾಗಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ನೆರವನ್ನು ಕೂಡ ಪಡೆದಿದ್ದಾರೆ.  ಹೊರಬರಲಾಗದೆ ಜನ ಮನೆಯಲ್ಲೇ ಬಂಧಿಯಾಗಿದ್ದಾರೆ. ಅಗತ್ಯ ಸರಕುಗಳು ಬೇಡಿಕೆ ಹೆಚ್ಚಾಗಿದೆ. ಪ್ರವಾಹ ಮತ್ತು ಹಿಮದಿಂದಾಗಿ ರಾಜಧಾನಿಗೆ ಸಂಪರ್ಕ ಕಲಿಸುವ ಎಲ್ಲಾ ರಸ್ತೆಗಳು ಬಂದ್‌ ಆಗಿವೆ. ಹಿಪಾತಕ್ಕೆ ಇಲಲಿವರೆಗೂ 7ಜನ ಸಾವನ್ನಪ್ಪಿದ್ದು, 26ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

Share Post